This page has been fully proofread once and needs a second look.

ಹನುಮಂತನೆಂಬೊಂದು ಹೊಸ ಮುಗಿಲು ಬಂದು
 

ಶ್ರೀರಾಮ ಸಂದೇಶ ಜಲವನ್ನು ತಂದು

ವೈದೇಹಿಯೆಂಬೊಂದು ಸಹ್ಸ್ಯವನ್ನು ಕಂಡು

ಮುದಗೊಳಿಸಿತಾ ಗಿಡವ ಜಲಧಾರೆ ಎರೆದು

ಕಾನನವ ಹೋಲುವಾ ಅಸುರ ನಿಕರವ ಸುಟ್ಟು
 

ಮರಳಿ ತೆರಳಿತು ಸೇರಿ ರಾಮಪದದಾಗಸವ
 
॥ ೧೫ ॥
 
ಗರುಡನಂದದಿ ಇವಗೆ ರೆಕ್ಕೆಗಳು ಇಲ್ಲ

ಖಗರಾಜನಂತಿವನು ಹಾರಬಲ್ಲವನಲ್ಲ

ಹಕ್ಕಿಯಂತಿರದೀತ ಹಾವುಗಳ ಮೆಲ್ಲ

ಜಗವನ್ನೇ ಹೊತ್ತಿರುವ ಶ್ರೀರಾಮಚಂದ್ರನನು

ಭುಜದಲ್ಲಿ ಕುಳ್ಳಿರಿಸಿ ಆ ಹನುಮದೇವ

ಹಾರಿದನು ಭಕ್ತಿಯಲಿ ಆತನನ್ನು ಪೊತ್ತು
 
॥ ೧೬ ॥
 
ರಘುವಂಶಕೇತು ಶ್ರೀರಾಮದೇವರು

ಹುಬ್ಬುಗಂಟಿಕ್ಕಿದರು ನಸುಕೋಪದಿಂದ

ಸಾಗರದ ಸಾಮ್ರಾಟನಂಜಿದನು ಆಗ

ಸಿದ್ಧವಾಯಿತು ಸೇತು ಸಾಗರದ ಮಧ್ಯದಲಿ
 

ಲಂಕೆಯ ಕಾಳಗದಿ ಹನುಮದೇವನು ಅಂದು
 

ರಾವಣಗೆ ತಿನಿಸಿದನು ಮುಷ್ಟಿಪ್ರಹಾರ
 
॥ ೧೭ ॥
 
ಲಂಕೆಯಲ್ಲಿನ ಯುದ್ಧ ಯಜ್ಞವೊಂದಂತಾಯ್ತು

ಪ್ರಜ್ವಲಿಸಿ ಉರಿದಿತ್ತು ರಾಮನೆಂಬಾ ಅಗ್ನಿ

ಯಜಮಾನನಾದನು ಸುಗ್ರೀವ ರಾಜ

ಋತ್ವಿಜನು ಲಕ್ಷ್ಮಣನು ಪ್ರತಿಪ್ರಸ್ಥಾತೃ!

ಯಜ್ಞದಾ ಅಧ್ವರ್ಯು ಹನುಮಂತ ದೇವ!

ಇದ ನೋಡಿ, ಕಾಳಗದ ಅಧ್ಯಾತ್ಮ ದೃಷ್ಟಿ!
 
ಮೊದಲನೆಯ ವರ್ಗ/7
 
15
 
16
 
17
 
18
 
॥ ೧೮ ॥