This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮ:

ಹದಿನಾಲ್ಕನೆಯ ಸರ್ಗ
 

 
ಶ್ರೀ ಮಧ್ವಾಚಾರ್ಯರ ಅಪ್ಪಣೆಯಂತೆ ಶಂಕರ ಪಂಡಿತರಿಂದ ಗ್ರಂಥ ಸ್ವೀಕಾರ
 

 
ಕಾರ್ತಿಕ ಮಾಸದಲ್ಲಿ ಮೇಘ ನೀರಸವಹುದು

ಅದರಂತೆ ಜಯಸಿಂಹ ಭೂಪತಿಯ ಬಲದಿಂದ

ಸ್ತಂಭ, ವಿಷಯಗಳೆಂಬ ಗ್ರಾಮ ಅಧಿಪತಿಗಳು

ಮಧ್ವಮುನಿಗಳ ಬಗ್ಗೆ ದ್ವೇಷವನು ತೊರೆದರು

ಮಧ್ವ ಸೂರ್ಯರು ಹುಟ್ಟಿ ಸುಜನ ಕಮಲಗಳರಳಿ

ಎಲ್ಲೆಡೆಯೂ ಪಸರಿಸಿತು ಹರ್ಷದಾಯಕ ದೃಶ್ಯ !
 
॥ ೧ ॥
 
"ಅಪಚಾರವಾಗಿಹುದು ತಾವು ಮನ್ನಿಸಬೇಕು''

ಇಂತೆಂಬ ಪ್ರಭುವಿನ ಬಿನ್ನಪವ ಮನ್ನಿಸುತ

ಶ್ರೀಮದಾಚಾರ್ಯರ ಆಣತಿಯ ಪಾಲಿಸುತ

ವೈರಿಗಳು ಅಪಹರಿಸಿ ಕೊಂಡೊಯ್ದ ಗ್ರಂಥಗಳ

ಮಧ್ವಮುನಿಗಳ ಗ್ರಂಥ ಭಾಂಡಾರಿಯಾಗಿದ್ದ

ಶಂಕರ ಪಂಡಿತರು ವಿನಯದಲ್ಲಿ ಪಡೆದರು
 
॥ ೨ ॥
 
ಸಭೆಗೆ ತ್ರಿವಿಕ್ರಮ ಪಂಡಿತರ ಆಗಮನ
 

 
ಕವಿಕುಲೋತ್ತಮರಾದ ಆ ತ್ರಿವಿಕ್ರಮರಿಗೆ

ಸೋದರನ ವಿಜಯವು ಮುದವನ್ನು ನೀಡಿತ್ತು.

ಗ್ರಾಮಾಧಿಪತಿಗಳು, ವಿಪ್ರ ನಿವಹದ ಮಧ್ಯೆ

ಆನಂದ ತೀರ್ಥರ ಚರಣ ಸನ್ನಿಧಿಯಲ್ಲಿ
ವಿನಯದಲ್

ವಿನಯದ
ಲಿ ಕುಳಿತಿದ್ದ ಜಯಸಿಂಹ ರಾಜನನು

ಪಂಡಿತಾಚಾರ್ಯರು ಹರಸಿ ಮುದಗೊಳಿಸಿದರು
 
1
 
2
 
3
 
॥ ೩ ॥