This page has been fully proofread once and needs a second look.

ಬೆರಗಾದ ಪಂಡಿತರು ಬೆಳಗಾದ ಕೂಡಲೇ

ವಿಷಯ ವಿನಿಮಯಕಾಗಿ ಮಧ್ವರನು ಕಂಡರು

ನಾನಾ ಪ್ರಮೇಯಗಳ ಚರ್ಚೆಯನ್ನು ನಡೆಸಿ

ಮಧ್ವ ಸಿದ್ಧಾಂತದಲ್ಲಿ ದೋಷವಿಲ್ಲೆಂದರು

ಆದರೂ ತಕ್ಷಣವೇ ಸ್ವೀಕರಿಸಲಿಲ್ಲ

ಜ್ಞಾನಿಗಳು ಎಲ್ಲವನೂ ಒರೆಗಲ್ಲಲಿರಿಸುವರು
 
॥ ೬೮ ॥
 
ಶ್ರೀ ಮಧ್ವಾಚಾರ್ಯರ ಬಳಿಗೆ ತ್ರಿವಿಕ್ರಮ ಪಂಡಿತರ ಆಗಮನ
 

 
ಚೆಲುಮೊಗದ ಕಿರುನಗೆಯ ಕಾಂತಿಯಿಂದೊಪ್ಪುವ

ನೋಟಕರ ಮನಸಿಗೆ ಆನಂದವೀಯುವ

ಆನಂದ ತೀರ್ಥರನು ವಿಷ್ಣು ಮಂಗಲದಲ್ಲಿ

ಮಂದಹಾಸದ ಮೊಗದ ನಾಲ್ಮೊಗನ ಬಳಿಗೆ

ತತ್ವಗಳ ತಿಳಿಯಲು ಅಮರೇಂದ್ರ ಬಂದಂತೆ
 

ಪಂಡಿತಾಚಾರ್ಯರು ಬಂದು ನಮಿಸಿದರು
 
68
 
230 /
॥ ೬೯ ॥
 
ಎಂಬಲ್ಲಿಗೆ
ಶ್ರೀ ಸುಮಧ್ವ ವಿಜಯ ಮತ್ನ್ನಡ ಕಾವ್ಯ
 
69
 
ಎಂಬಲ್ಲಿಗೆ
ವಿಕುಲತಿಲಕ ಶ್ರೀತ್ಕವಿಕುಲತಿಲಕ ಶ್ರೀರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ
ಶ್ರೀ ಸುಮಧ್ವ ವಿಜಯ ಕಾವ್ಯದ

ಆನಂದಾಂಕಿತ ಹದಿಮೂರನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.