This page has been fully proofread once and needs a second look.

"ಒದಗಿಹುದು ಅವಕಾಶ ವಿಧಿಯ ಬಲದಿಂದೊಂದು

ಮಧ್ವಮುನಿಯೆಂಬುವ ಪ್ರತಿವಾದಿ ಗಜವನ್ನು

ಕೂಡಲೇ ಎದುರಿಸಿರಿ ನಿಮ್ಮೆಲ್ಲ ಬಲದಿಂದ

ಸ್ವಜನ ವೃಂದಕೆ ಬಂದ ಭಯವನ್ನು ಪರಿಹರಿಸಿ

ಚಂದ್ರಮನ ತೆರದಲ್ಲಿ ಧವಳ ಕೀರ್ತಿಯ ಗಳಿಸಿ

ನಿಮ್ಮಲ್ಲಿ ಆಶ್ರಯವ ಬೇಡುವೆವು ನಾವಿಂದು"
 
॥ ೬೪ ॥
 
ಮಾಯಿಜನರಿಂದಂದಿಂಥ ಪ್ರಾರ್ಥನೆಯ ಕೇಳಿ

ಪೇಚಿನಲಿ ಸಿಲುಕಿದರು ಪಂಡಿತಾಚಾರ್ಯರು
 

ತಮ್ಮದೇ ಜನರೆಂಬ ಒಂದು ಕಾರಣದಿಂದ
 

ಅನುಕೂಲಕರವಾದ ಮಾತುಗಳನಾಡಿದರು
 

ಸಂಶಯವ ಪರಿಹರಿಪ ಸಾಮರ್ಥ್ಯವುಳ್ಳವರು

ಮಧ್ವರನು ಜಯಿಪುದಕೆ ಸಂಶಯವ ತಳೆದರು
 
॥ ೬೫ ॥
 
ಮಧ್ವ ವಚನಗಳೆಂಬ ತೀಕ್ಷ್ ಅಂಕುಶವನ್ನು

ಬಲವಾಗಿ ತಿವಿಯುವ ಕೆಲ ಮಧ್ವಶಿಷ್ಯರನ್ನು
ನು
ಖೇದಗೊಳಿಸುತ ಅಟ್ಟಿ ಆ ತ್ರಿವಿಕ್ರಮರು

ಮುನಿದೆದ್ದ ಮದ್ದಾನೆ ತೆರದಲ್ಲಿ ಓಡುತ್ತ

ವಿವಿಧ ಉತ್ತರವೆಂಬ ಧೂಳಿಯನು ಎರಚುತ್ತ

ಕುರುಡರನ್ನಾಗಿಸಿತು ಆ ಮಧ್ವ ಶಿಷ್ಯರನು
 
॥ ೬೬ ॥
 
ತ್ರಿವಿಕ್ರಮ ಪಂಡಿತರಿಂದ ಮಧ್ಗ್ರಂಥಗಳ ಅಧ್ಯಯನ
 

 
ಅತಿ ವಿವೇಕಿಗಳವರು, ಪಂಡಿತಾಚಾರ್ಯರು

ರಾತ್ರಿಯ ಕಾಲದಲ್ಲಿ ಅತಿ ಗೋಪ್ಯವಾಗಿ

ಆನಂದ ತೀರ್ಥರ ಗ್ರಂಥ ಸಮುದಾಯವನು

ಸೂಕ್ಷ್ಮಾವಲೋಕನದಿ ಅಧ್ಯಯನ ಮಾಡಿದರು

ಮಧ್ವಮುನಿ ಮಂಡಿಸಿದ ಶಾಸ್ತ್ರ ಸಾರವ ಕಂಡು

ವಿಸ್ಮಯವ ತಳೆದರು ತಮ್ಮ ಮನದಲ್ಲಿ
 
ಹದಿಮೂರನೆಯ ಸರ್ಗ / 229
 
64
 
65
 
66
 
67
 
॥ ೬೭ ॥