This page has been fully proofread once and needs a second look.

"ವೇದಾದಿ ಶಾಸ್ತ್ರಗಳ, ಭಾರತ, ಪುರಾಣಗಳ

ಸಾರಗಳ ಸಂಗ್ರಹಿಸಿ ಸ್ವತಃ ಯೋಚಿಸಬೇಕು

ಅವುಗಳಲ್ಲಿನ ತಿರುಳ ಮನನ ಮಾಡಲೇ ಬೇಕು

ಆ ಮುಕುಂದನು ಸಕಲ ಕಲ್ಯಾಣಗುಣ ಪೂರ್ಣ

ಸ್ಮೃತ್ಯುಕ್ತ ಧರ್ಮಗಳ ವಿಹಿತದಲ್ಲಿ ಆಚರಿಸಿ

ಶ್ರೀ ಮುಕುಂದನ ನಾವು ಅನುದಿನವೂ ಸ್ಮರಿಸೋಣ"
 
॥ ೬೦ ॥
 
ಇಂತು ನಿಶ್ಚಯಿಸುತ್ತ ಆ ಪಂಡಿತಾಚಾರ್ಯರು

ಅಪ್ರತಿಮ ಪ್ರತಿಭೆಯ ನೆರವನ್ನು ಪಡೆಯುತ್ತ

ಅಂತರಂಗದ ದನಿಗೆ ಧ್ವನಿಯನ್ನು ಕೂಡಿಸುತ

ವೇದಗಳ ಅಧ್ಯಯನದಿ ಸ್ವತಃ ತೊಡಗಿದರು

ಈಗಾಗಲೇ ವ್ಯಾಪಿಸಿದ ಗುರುಮಧ್ವ ಕೀರ್ತಿ

ಪಂಡಿತರ ಕಿವಿಗಳಿಗೂ ತ್ವರೆಯಿಂದ ಸೇರಿತು
 
॥ ೬೧ ॥
 
"ಪರಂಪರಾಗತವಹುದು ಈ ಮಾಯಾವಾದ
 

ಇಂತಹ ಪ್ರಾಚೀನ ಶಾಸ್ತ್ರವನ್ನೀಗ

ಮಧ್ವಮುನಿ ಎಂಬುವ ನಿಷ್ಣಾತ ವಾಗ್ರಿಮಿಗಳು

ಎಡಬಿಡದೆ ಖಂಡಿಸುತ ದಿಗ್ವಿಜಯ ಸಾರಿಹರು

ಯುಕ್ತಿ ನಿಪುಣರು ನೀವು ಅವರ ಸೋಲಿಸಬೇಕು

ಬೇರಾರಿಗೂ ಈ ಕೆಲಸ ಸಾಧ್ಯವಿಲ್ಲ
 
" ॥ ೬೨ ॥
 
"ಪಂಡಿತರ ನಿವಹದಲಿ ತ್ರಿವಿಕ್ರಮರು ನೀವು

ವಾದಿಗಜಗಳಲೆಲ್ಲ ಬಲಶಾಲಿಗಳು ನೀವು

ವೇದ ತೀರ್ಥಗಳಲ್ಲಿ ಮಿಂದು ಬಂದವರು

ಶಾಸ್ತ್ರ ವಾರಿಧಿಯಲ್ಲಿ ವಿಹರಿಸಿರುವವರು

ನವಕಾವ್ಯರಸಗಳಲಿ ಅನುರಾಗ ತಳೆದಿಹಿರಿ

ನಿಮ್ಮನೆದುರಿಪ ಗಜವು ಹುಟ್ಟಿಯೇ ಇಲ್ಲ
 
228 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
60
 
61
 
62
 
63
 
" ॥ ೬೩ ॥