This page has not been fully proofread.

"ಇಂಥ ವಿಷಯದಿ ನಾವು ಆಗ್ರಹವ ಬಿಡಬೇಕು
ಅಂತಹ ಆಗ್ರಹವ ತ್ಯಜಿಸಿ ಪರಿಕಿಸಿದಾಗ
ಸೂತ್ರಗಳ ಅರ್ಥಕ್ಕೆ ಅನುಗುಣವು ಎನಿಸುವ
ಒಂದಾದರೂ ಭಾಷ್ಯ ನಮಗೆ ದೊರೆಯುವುದಿಲ್ಲ
 
ಶಂಕರಾಚಾರ್ಯ ಕೃತ ಭಾಷ್ಯವೊಂದನ್ನು ಮಾತ್ರ
ಪಠಣ ಮಾಡದೆ ಇರಲು ಸಾಧ್ಯವೆಮಗಿಲ್ಲ
 
"ಅಲ್ಪಮತಿಗಳು ನಾವು, ಅತಿ ಅಪ್ರಬುದ್ಧರು
ಉಪನಿಷತ್ತಿನ ವಾಣಿ ಕೇಳಿಸದು ನಮಗೆ
ಎಂದೆನುತ ಪರಬ್ರಹ್ಮ ತತ್ವ ಮನಗಾಣದಿರೆ
ಮುಕ್ತಿಯನ್ನು ಕಾಂಬುವುದು ಎಂತು ಸಾಧ್ಯ ?
ಅದಕೆಂದೇ ನಾವಿಂದು ಬ್ರಹ್ಮಸೂತ್ರಗಳಂಥ
ಸಚ್ಛಾಸ್ತ್ರಗಳಲಿರುವ ತತ್ವಗಳ ಚಿಂತಿಪೆವು
 
"ತತ್ವವನು ಬಲ್ಲವರು ಇಂತು ಪೇಳುತಲಿಹರು
ವಿತತನವ ಶ್ರೀ ಹರಿಯು ಅತ್ಯುಪಾಸ್ಯನು ಅವನು
ಸುಜ್ಞಾನ, ಸುಖಪೂರ್ಣ, ಕರ ಚರಣ ಯುಕ್ತ
ಇಂತು ಪ್ರತಿಪಾದಿತನು ಆ ನಮ್ಮ ಪರಮಾತ್ಮ
ಆಗಲಾರನು ಬ್ರಹ್ಮ ಬರಿಯ ಬೆಳಕಿನ ರೂಪ
ಶಾಸ್ತ್ರಗಳ ಸಾರವನು ನಾವರಿಯಬೇಕು
 
"ಬ್ರಹ್ಮನೆಂಬುದು ಒಂದು ಬೆಳಕು ಸಹ ಅಲ್ಲವೆ ?
ಹಾಗಾದರಲ್ಲೊಂದು ಕತ್ತಲೆಯ ತೆರೆ ಇಹುದೆ ?
ಇಂಥ ಕತ್ತಲೆಯಲ್ಲಿ ಬ್ರಹ್ಮನನು ಕಾಂಬುವುದೆ ?
ಮೋಕ್ಷವಹುದೆ ಬರಿಯ ಕತ್ತಲಿನ ತಡಕಾಟ ?
ಬ್ರಹ್ಮ ನಿಗು ಣನೆಂಬ ತತ್ವವದು ಮಿಥ್ಯ
ಎಮ್ಮ ಉದ್ಧರಿಪುದೆ ಇಂತಹ ತತ್ವ ?
 
ಹದಿಮೂರನೆಯ ಸರ್ಗ / 227
 
56
 
57
 
58
 
59