This page has been fully proofread once and needs a second look.

ಸಕಲ ವೇದಾಂಗಗಳ ಅಧ್ಯಯನ ಮಾಡಿ

ಲಿಕುಚ ವಂಶೋದ್ಭವರಾದ ಈ ತ್ರಿವಿಕ್ರಮರು

ಅಂದಿನ ಕಾಲದ ಎಲ್ಲ ಪಂಡಿತ ಗಣದ

ಮಾನ್ಯತೆಯ ಗಳಿಸುತ್ತ ವಿಖ್ಯಾತರಾದರು

ಸಜ್ಜನರು ಎಂಬುವ ದಾರಿಗರ ಉಪಕರಿಸಿ

ಕಾವ್ಯವೆಂಬುವ ಫಲದ ರಸವ ನೀಡಿದರು
 
॥ ೪೮ ॥
 
ಮಾಯಾವಾದವಿದು ತರ್ಕಕ್ಕೆ ದೂರ

ಪೂರ್ವಾಪರ ಚಿಂತನೆಗೆ ಇದು ಒಂದು ಆಭಾಸ

ಇಂತೆಂದು ಅವರಾಗಿ ಪ್ರತಿ ಪಾದಿಸಿದರು

ಅವರ ಸಂಶಯವನ್ನು ಗುರು ನಿವಾರಿಸಲಿಲ್ಲ
 

ಆದರೂ ಗೆಳೆಯರ ಮನವಿಗೆ ಮನಸೋತು

ಗುರುಗಳ ಪ್ರವಚನವ ಶ್ರವಣ ಮಾಡಿದರು
 
॥ ೪೯ ॥
 
ವಾಗ್ವಿಲಾಸದಿ ಕೂಡಿ ಆ ತ್ರಿವಿಕ್ರಮರು

ನಾರಾಯಣನ ತೆರದಿ ವೇದ ನಿಪುಣತೆಯೆಂಬ

ಉದಯವನು ಹೊಂದುತ್ತ ಬಾಲ್ಯವನು ತ್ಯಜಿಸಿದರು

ಇಂತು ಆ ತ್ರಿವಿಕ್ರಮರು ಪ್ರೌಢರಾಗುತ್ತಿರಲು

ಭಾನುಪಂಡಿತನಂಥ ಸಕಲ ವಾದಿಗಳೆಲ್ಲ

ಸೂರ್ಯನೆದುರಿನ ಮಿಣುಕು ಹುಳುವಿನಂತಾದರು
 
॥ ೫೦ ॥
 
ಸಪಾದ ಲಕ್ಷವಿಹ ಮಾಯಾವಾದದ ಗ್ರಂಥ

ಇವುಗಳಲಿ ಪರಿಣತಿಯ ಪಡೆದಿಹರು ತ್ರಿವಿಕ್ರಮರು

ಅತಿ ಸೂಕ್ಷ್ಮಮತಿಯವರು, ಯುಕ್ತಿಶೂರರು ಅವರು

ಹಿರಿಮೆಯಿಂದಲಿ ಅವರು ಜಗದಲ್ಲಿ ಮಾನ್ಯರು

ಇಂತಹ ನಂದನನ ಹತ್ತಿರಕೆ ಕರೆದು

ಏಕಾಂತದಲ್ಲಿ ತಂದೆ ಇಂತೆಂದು ಉಸುರಿದರು
 
ಹದಿಮೂರನೆಯ ಸರ್ಗ / 225
 
48
 
49
 
50
 
51
 
॥ ೫೧ ॥