This page has been fully proofread once and needs a second look.

ಬಾಲಕನು ಹಾರಿದನು ಸೂರ್ಯಮಂಡಲದ
ತ್ತ
ತನ್ನ ತೋಳ್ಲದಿಂದ ರಾಹುವನೆ ಬಡಿದ
 

ಸುರಪತಿಯ ಆಯುಧರೂಕೂ ಮಣಿಯದಾ ಕಾಯ!

ಇಂತಹ ಅದ್ಭುತದ ಕಾವ್ರ್ಯಗಳ ನೋಡಿ

ದೇವಸಭೆ ಬೆರಗಾಗಿ ಸ್ತುತಿಸಿತ್ತು ಹನುಮನನು

ಸುಗ್ರೀವ ಸಖ ಕಂಡ ಲಕ್ಷ್ಮೀಶನನ್ನು
 
॥ ೧೧ ॥
 
ಹನುಮನೆರಗಿದನಾಗ ರಾಮನಾ ಪಾದಕ್ಕೆ

ತುಂಬು ಭಕ್ತಿಯ ಭಕ್ತ ಆ ರಾಮನ ದೂತ

ಭಕ್ತಿ ಭಾವದ ಮುಗ್ಧ ಸಾಕಾರ ಮೂರುತಿಯು

ತನ್ನ ಚರಣಾರವಿಂದಗಳಿಗೆರಗಿದುದ ಕಂಡು

ಹಿಡಿದೆತ್ತಿ ನಿಲಿಸಿದನು ಶ್ರೀ ರಾಮಚಂದ್ರನು

ಕಮಲಗರ್ಭವ ಪೋಲ್ವ ತನ್ನ ತೋಳುಗಳಿಂದ
 
॥ ೧೨ ॥
 
ಒಂಟಿ ಸಾಲಲಿ ಬೆಳೆದ ಏಳು ಸಾಲ್ಮರಗಳನು
 

ಒಂಟಿ ಬಾಣದಿ ಹೊಡೆದು ಉರುಳಿಸಿದ ರಾಮ
 

ವಾಲಿಯಂತಹರಿಗೆ ಸಾಧ್ಯವಿರದೀ ಪರಿಯು !

ಇಂದ್ರಸುತ ವಾಲಿಯನು ಸಂಹರಿಸಿದಾ ರಾಮ

ಸೂರಸುತ ಸುಗ್ರೀವಗೆ ಮುದವ ನೀಡಿದನು
 

ವಾಯುಸುತ ಹನುಮನನು ತೆಂಕಣಕ್ಕೆ ಕಳುಹಿದನು
 
॥ ೧೩ ॥
 
ಅಪ್ರತಿಮ ಗುಣಗ್ರಾಹಿ ಶ್ರೀರಾಮನಂದು

ಹನುಮನನು ಕಿವಿಯ ಬಳಿ ಕರೆದು ತಂದು
 

ಸಂದೇಶವನ್ನು ಸುರಿ ಬೀಳ್ಕೊಟ್ಟನೆಂದು
ನಂದು
ಕಿವಿಯವರೆಗೆಳೆದು ಬಿಟ್ಟ ಬಾಣದ ತೆರದಿ

ಶೋಭಿಸಿದ ಹನುಮಂತ, ಉಗ್ರಪ್ರತಾಪಿ !

ರೆಕ್ಕೆಗಳ ಹೊಂದಿದಾ ಅಂಬು ಈ ಹನುಮ !
 
6/ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
 
11
 
12
 
13
 
14
 
॥ ೧೪ ॥