This page has been fully proofread once and needs a second look.

ಭಾಗವತ ಪ್ರವಚನ
 

 
ಮಧ್ವಮುನಿಗಳ ಶಿಷ್ಯ ಹೃಷಿಕೇಶ ತೀರ್ಥರು

ಅನುರೂಪ ಗುಣಗಳಿಗೆ ಭಾಜನರು ಅವರು

ಭಾಗವತ ವಾಚನದಿ ಪರಮ ಪರಿಣತರು

ಶಿಷ್ಯರಾ ವಾಚನಕೆ ಆನಂದ ತೀರ್ಥರು

ಭವದ ಬಂಧಗಳನ್ನು ಸುಲಭದಲಿ ಪರಿಹರಿಪ

ಚಕ್ರಪಾಣಿಯ ಕಥೆಯ ವ್ಯಾಖ್ಯಾನ ಮಾಡಿದರು
 
॥ ೪೦ ॥
 
ಅವರ ಆ ಕಥನವು ಪರಮ ಧೈರ್ಯದ ಸಾರ

ಮಧುರ ಪುಷ್ಕಲ ಭಾವ, ಪರಿಪೂರ್ಣ ಪಾಂಡಿತ್ಯ

ಸುಪ್ರಸನ್ನತೆಯನ್ನು ಸೂಸುವಾ ಪ್ರವಚನವು

ಪಂಡಿತರ, ಪಾಮರರ ಮನವನ್ನು ಗೆಲಿದಿತ್ತು

ಆನಂದ ಜಲದಿಂದ ತುಂಬಿದ್ದ ಸಾಗರದಿ
ಶೋ

ಶ್ರೋ
ತೃಗಳನೆಲ್ಲರನೂ ಸಂಪೂರ್ಣ ಮುಳುಗಿಸಿತು
 
॥ ೪೧ ॥
 
ಆನಂದ ತೀರ್ಥರ ದಿವ್ಯ ಲೀಲೆಗಳನ್ನು

ನನ್ನಂಥ ಪಾಮರಗೆ ಬಣ್ಣಿಸಲು ಸಾಧ್ಯವೆ ?

ಆವರ ಆ ಆಸನವು, ಗಮನ, ಸಂಕಥೆಗಳು

ಮುಂತಾದ ಲೀಲೆಗಳ ಸ್ಮರಣೆಯಿಂದಲೆ ಸಾಕು

ಭವದ ಬಂಧನ ನೀಗಿ ಮುಕುತಿ ದೊರಕುವುದು

ಅವುಗಳನು ಬಣ್ಣಿಸಲು ಅಮರರಿಗೆಗೇ ಸಾಧ್ಯ
 
॥ ೪೨ ॥
 
ತ್ರಿವಿಕ್ರಮ ಪಂಡಿತರ ಪೂರ್ವೋತ್ತರ
 

 
ಅಂದಿನಾ ದಿನದಲ್ಲಿ ಆ ಕಾಲದಲ್ಲಿ

ಅಭವದ್ದುಗು ಹರೆಂಬ ಹೆಸರನ್ನು ಹೊತ್ತ

ಲಿಕುಚ ವಂಶೋದ್ಭವರು, ಪಂಡಿತೋತ್ತಮರು

ಆಂಗಿರಸ ಗೋತ್ರದಲ್ಲಿ ಜನಿಸಿದ ಮಹಿಮರು

ಶ್ರೇಷ್ಠತಮ ಕವಿಗಳು, ಉತ್ತಮ ತಪಸ್ವಿಗಳು
 

ಅಖಿಲ ವಾದಿಗಳಿಂದ ವಂದನೀಯರು ಅವರು
 
ಹದಿಮೂರನೆಯ ಸರ್ಗ / 223
 
40
 
41
 
42
 
43
 
॥ ೪೩ ॥