2023-03-12 06:18:54 by jayusudindra
This page has been fully proofread once and needs a second look.
ಆನಂದ ತೀರ್ಥರ ಆ ಚಂದ ಕಾಯ !
ವಕ್ಷವೈಶಾಲ್ಯವದು ರಮ್ಯ ರಮಣೀಯ !
ಹೆಗಲುಗಳು ಉತ್ತುಂಗ, ಬಾಹುಗಳು ಅತಿ ಪುಷ್ಟ
ಪಾಣಿಪಲ್ಲವವೆರಡೂ ಮಧುರ ಪಾಟಲ ವರ್ಣ
ಅವುಗಳಲಿ ಬೆಳಗಿರುವ ಆ ಊರ್ಧ್ವ ರೇಖೆ
ಧ್ವಜ, ಚಕ್ರ, ಮೊದಲಾದ ಶ್ರೇಷ್ಠತಮ ಲಾಂಛನ !॥ ೩೨ ॥
ಆನಂದ ತೀರ್ಥರ ಆ ಚಂದ್ರ ವದನ !
ಮೊದಲ ನೋಟಕೆ ಪೂರ್ಣ ಚಂದ್ರಬಿಂಬದ ತರಹ
ಪರಿಶುದ್ಧ ಕಾಂತಿಯ ಆಗರವು ಆಗಿಹುದು
ಬಳಿಕ ಆ ನಲ್ಮೊಗವು ಅಕಳಂಕವೆಂಬುದನು
ಅರಿತ ಆ ನೋಟಕರು ವಿಭ್ರಾಂತರಾಗುವರು
ಚಂದ್ರಮಂಡಲಕಿಂತ ಆ ವದನವೇ ಪರಿಶುದ್ಧ! ॥ ೩೩ ॥
ಆನಂದ ತೀರ್ಥರ ಆ ದಂತ ಪಂಕ್ತಿ!
ಮಂದಹಾಸದಿ ಹೊಳೆವ ಕುಂದ ಪುಷ್ಪಗಳಂತೆ
ಅರುಣ ರಾಗದ ಅಧರ ಅತ್ಯಂತ ಸುಂದರ !
ತಾವರೆಯ ಹೂಗಳನು ಹೋಲುವಾ ಕಣ್ಣುಗಳು !
ಆ ಕಂಗಳಿನ ನೋಟದಲಿ ಸಕಲ ಲೋಕಗಳನ್ನು
ಆನಂದ ಪಡಿಸುವರು ಆನಂದ ತೀರ್ಥರು ॥ ೩೪ ॥
ಅವರ ಕರ್ಣದ್ವಯವು ಅತ್ಯಂತ ಭಾಸುರವು
ತುಳಸಿಯ ಗುಚ್ಛಗಳು ಶೋಭಿಸಿವೆ ಕಿವಿಗಳಲಿ
ಅವರ ಆ ಕೆನ್ನೆಗಳ ಕಾಂತಿ ಅದ್ಭುತವಹುದು
ಮೂರು ಭುವನಗಳಲ್ಲಿ ಅವರ ಆ ಭೂಲಾಸ್ಯ
ಸಜ್ಜನಕೆ ಒಳಿತನ್ನೂ ದುಷ್ಟರಿಗೆ ಕೆಡುಕನ್ನೂ
ತರುವಲ್ಲಿ ನಿಪುಣತೆಯ ಸಾಧಿಸಿತ್ತು ॥ ೩೫ ॥
ವಕ್ಷವೈಶಾಲ್ಯವದು ರಮ್ಯ ರಮಣೀಯ !
ಹೆಗಲುಗಳು ಉತ್ತುಂಗ, ಬಾಹುಗಳು ಅತಿ ಪುಷ್ಟ
ಪಾಣಿಪಲ್ಲವವೆರಡೂ ಮಧುರ ಪಾಟಲ ವರ್ಣ
ಅವುಗಳಲಿ ಬೆಳಗಿರುವ ಆ ಊರ್ಧ್ವ ರೇಖೆ
ಧ್ವಜ, ಚಕ್ರ, ಮೊದಲಾದ ಶ್ರೇಷ್ಠತಮ ಲಾಂಛನ !॥ ೩೨ ॥
ಆನಂದ ತೀರ್ಥರ ಆ ಚಂದ್ರ ವದನ !
ಮೊದಲ ನೋಟಕೆ ಪೂರ್ಣ ಚಂದ್ರಬಿಂಬದ ತರಹ
ಪರಿಶುದ್ಧ ಕಾಂತಿಯ ಆಗರವು ಆಗಿಹುದು
ಬಳಿಕ ಆ ನಲ್ಮೊಗವು ಅಕಳಂಕವೆಂಬುದನು
ಅರಿತ ಆ ನೋಟಕರು ವಿಭ್ರಾಂತರಾಗುವರು
ಚಂದ್ರಮಂಡಲಕಿಂತ ಆ ವದನವೇ ಪರಿಶುದ್ಧ! ॥ ೩೩ ॥
ಆನಂದ ತೀರ್ಥರ ಆ ದಂತ ಪಂಕ್ತಿ!
ಮಂದಹಾಸದಿ ಹೊಳೆವ ಕುಂದ ಪುಷ್ಪಗಳಂತೆ
ಅರುಣ ರಾಗದ ಅಧರ ಅತ್ಯಂತ ಸುಂದರ !
ತಾವರೆಯ ಹೂಗಳನು ಹೋಲುವಾ ಕಣ್ಣುಗಳು !
ಆ ಕಂಗಳಿನ ನೋಟದಲಿ ಸಕಲ ಲೋಕಗಳನ್ನು
ಆನಂದ ಪಡಿಸುವರು ಆನಂದ ತೀರ್ಥರು ॥ ೩೪ ॥
ಅವರ ಕರ್ಣದ್ವಯವು ಅತ್ಯಂತ ಭಾಸುರವು
ತುಳಸಿಯ ಗುಚ್ಛಗಳು ಶೋಭಿಸಿವೆ ಕಿವಿಗಳಲಿ
ಅವರ ಆ ಕೆನ್ನೆಗಳ ಕಾಂತಿ ಅದ್ಭುತವಹುದು
ಮೂರು ಭುವನಗಳಲ್ಲಿ ಅವರ ಆ ಭೂಲಾಸ್ಯ
ಸಜ್ಜನಕೆ ಒಳಿತನ್ನೂ ದುಷ್ಟರಿಗೆ ಕೆಡುಕನ್ನೂ
ತರುವಲ್ಲಿ ನಿಪುಣತೆಯ ಸಾಧಿಸಿತ್ತು ॥ ೩೫ ॥