This page has been fully proofread once and needs a second look.

ನರದೇವನನು ಕಾಂಬ ತವಕದಲಿ ಹಳ್ಳಿಗರು

ನೂರಾರು ಸಂಖ್ಯೆಯಲ್ಲಿ ಹಾದಿಯಲಿ ನಿಂದು
 

ಪರಿವಾರದಾಗಮನ ಕಾಂಬುದಕೆ ಕಾದರು
 

ರಾಜನ ಜೊತೆಯಲ್ಲಿ ಗುರುಗಳನೂ ಕಂಡು

ಚಕಿತಗೊಂಡರು ಅವರು ಮಧ್ತೇಜವ ಕಂಡು
 

ಆ ಕಾಂತಿ ರಾಶಿಯನು ಕಾತುರದಿ ಸವಿದರು
 
॥ ೨೪ ॥
 
ಶ್ರೀ ಆಚಾರ್ಯರ ಅಪೂರ್ವ ಆಕೃತಿಯ ವರ್ಣನೆ
 

 
ಮಧ್ವಶಿಷ್ಯರ ಗಡಣ ನೋಡುವುದಕ್ಕೆ ಹಬ್ಬ !

ತೋಳಿನಲ್ಲಿ ಮುದ್ರೆಗಳು, ಶಂಖಚಕ್ರದ ಚಿಹ್ನೆ!

ಕೊರಳಲ್ಲಿ ರಮಣೀಯ ಕಮಲಾಕ್ಷಮಾಲೆ

ಸಂಭ್ರಮದ ಉತ್ಸವದ ಮುಂಚೂಣಿಯಲ್ಲಿ

ನಲಿಯುತ್ತ ನರ್ತಿಸುವ ನರ್ತನವಿಶಾರದರು !

ಇನಿದನಿಯ ಇಂಪಾದ ಗಾಯನದ ಗಾಯಕರು
 
॥ ೨೫ ॥
 
ಗುರುಗಳ ಕರುಣೆಯನ್ನು ಪಡೆಯ ಬೇಕೆನ್ನುವ

ಉತ್ಕಟಾಕಾಂಕ್ಷೆಯಲಿ ಜಯಸಿಂಹ ರಾಜನು

ಕಾಪಟ್ಯವನು ತ್ಯಜಿಸಿ ದಾಸ್ಯವನ್ನು ಹೊಂದಿ

ಜನತೆಯ ಒತ್ತಡವ ಕಿಂಚಿತ್ತು ಲಕ್ಷಿಸದೆ

ಗುರುಗಳನ್ನು ಅನುಸರಿಸಿ ಅತಿ ವಿನಯಭಾವದಲ್ಲಿ
ಲಿ
ಕೈಗಳನ್ನು ಜೋಡಿಸು ಭಕ್ತಿಯಲಿ ನಡೆದನು
 
॥ ೨೬ ॥
 
ಗುರು ಮಧ್ವರಾಯರದು ಅತಿ ಹಿರಿಯ ವ್ಯಕ್ತಿತ್ವ!

ಇದು ಹೀಗೆಯೇ ಎಂದು ನಿರ್ಧರಿಸಲಾಗದದು

ಆ ದಿವ್ಯ ತೇಜಸ್ಸು ! ಆ ಪ್ರಖರ ಕಾಂತಿಯು !

ಸೂರ್ಯನನು ನಾಚಿಸುವ ಆ ಜಾಜ್ವಲ್ಯ ಪ್ರಭೆಯು

ಅವರು ನಡೆದಾಡುವ ಭೂಮಿಯನ್ನೆಲ್ಲ
 

ಸೂರ್ಯನಿಗೂ ಮಿಗಿಲಾಗಿ ಬೆಳಗಿ ಬರುತಿದ್ದರು
 
ಹದಿಮೂರನೆಯ ಸರ್ಗ / 219
 
24
 
25
 
26
 
27
 
॥ ೨೭