This page has been fully proofread once and needs a second look.

ಇಂತು ಮುನ್ನಡೆದ ಆ ಮಧ್ವರ ಹಿಂದೆ

ಸಾವಿರದ ಸಂಖ್ಯೆಯಲ್ಲಿ ನಡೆದರಾ ಮಂದಿ

ಪುರುಷಸರ್ವೋತ್ತಮರು, ಆನಂದ ತೀರ್ಥರು

ಅವರನ್ನು ಕಣ್ಣಾರೆ ಕಂಡಿದ್ದ ಮಂದಿಗೆ

ಪಯಣದ ಶ್ರಮವಿನಿತು ತೋರಲೇ ಇಲ್ಲ

ಆಚಾರ್ಯ ಸ್ಮರಣೆಯೇ ಮುಕುತಿಯನು ನೀಡುವುದು
 
॥ ೨೦ ॥
 
ಜಯಸಿಂಹ ರಾಜನಿಂದ ಸ್ವಾಗತ
 

 
ಮದನಾಧಿಪತಿ ಇರುವ ಆ ತಾಣದಲ್ಲಿ

ಆಚಾರ್ಯ ಮಧ್ವರು ಬಂದಿಹುದ ಕೇಳಿ

ಸ್ತಂಭಕೇಸರಿ ಎಂಬ ಬಿರುದನ್ನು ಹೊತ್ತ
 

ಜಯಸಿಂಹನೆಂಬುವ ಆಳರಸನಾಗ
 

ತನ್ನೆಲ್ಲ ಪರಿವಾರ ಜನರನ್ನು ಕೂಡಿ

ತ್ವರೆಯಿಂದ ಮಧ್ವರನು ಸ್ವಾಗತಿಸ ಹೊರಟ
 
॥ ೨೧ ॥
 
ಮಧ್ವರಾಯರು ಬರುವ ಸ್ವಲ್ಪ ಹೊತ್ತಿಗೆ ಮುನ್ನ

ಜಯಸಿಂಹ ರಾಜನು ಆ ಸ್ಥಳಕೆ ಬಂದು

ತ್ವ
ರೆಯಿಂದ ಪಲ್ಲಕ್ಕಿಯಿಂದಿಳಿದು ನಿಂತು

ಅಂಗ ರಕ್ಷಕರನ್ನು ದೂರದಲ್ಲಿರಿಸಿ

ವಿಪ್ರರ ಹಿಂದೆ ತಾ ಗೌರವದಿ ನಡೆದು

ತ್ರಿಜಗವಂದಿತರಾದ ಮಧ್ವರಿಗೆ ನಮಿಸಿದನು
 
॥ ೨೨ ॥
 
ಜಯಸಿಂಹ ರಾಜನಿಗೆ ಗುರುಗಳಲ್ಲಿ ಅತಿ ಭಕ್ತಿ

ವಿನಯ ಗೌರವದಿಂದ ಆರ್ದ್ರ್ರವಾಗಿಹ ಮನಸು

ಗುರುಗಳನು ಆದರದಿ ಸ್ವಾಗತಿಸಿ ರಾಜನು

ಮಧ್ವರನು ಮುಂದಿಟ್ಟು ಹಿಂದೆ ತಾ ನಡೆದನು

ತ್ವರೆಯಿಂದ ಪಯಣಿಸುತ ಆ ಗುರುಶಿಷ್ಯಗಣವು

ವಿಷು ಷ್ಣುಮಂಗಲದೊಂದು ಮಂದಿರಕ್ಕೆ ಬಂದರು.
 
218/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥