This page has been fully proofread once and needs a second look.

ಆಚಾರ್ಯ ಮಧ್ವರು ಮುಖದಲ್ಲಿ ಧರಿಸಿದ್ದ

ಚಕ್ರ ಶಂಖದ ಮುದ್ರೆ, ಊರ್ಧ್ವ ಪುಂಡ್ರಗಳೆಲ್ಲ

ಶುಷ್ಕವಾಗಿಹುದನ್ನು ಶಿಷ್ಯನೊಬ್ಬನು ಕಂಡು

ಧರಿಸಲತಿ ಶ್ರೇಷ್ಠತಮ, ಮನಕೆ ಮುದವನು ಕೊಡುವ

ಶ್ರೀ ಹರಿಯ ನಿರ್ಮಾಲ್ಯ ತುಲಸಿಮಾಲೆಯನೊಂದ

ಗುರುವ ಸಿರಿ ಕಂಠದಲಿ ಭಕ್ತಿಯೊಳು ಮುಡಿಸಿದನು
 
॥ ೧೨ ॥
 
ಉಸಿರು, ಮಾತುಗಳನ್ನು ಅಂಕೆಯಲ್ಲಿ ಇರಿಸುತ್ತ

ಗುರುಮಧ್ವರ ಶಿಷ್ಯ ಯತಿ ಶ್ರೇಷ್ಠರೊಬ್ಬರು

ಪರಿಶುದ್ಧ ಮನದಿಂದ, ಅತಿ ಶುದ್ಧ ಹಸ್ತದಲ್ಲಿ
ಲಿ
ಕುಂಡಲದಿ ಶೋಭಿಸುವ, ಗುಣಬದ್ಧವಾಗಿದ್ದ

ಚಕ್ರ, ಮೂರ್ತಿಗಳಿಂದ ತುಂಬಿ ತುಳುಕುತಲಿದ್ದ

ದೇವರ ಪೆಟ್ಟಿಗೆಯ ತಲೆಯಲ್ಲಿ ಹೊತ್ತರು
 
॥ ೧೩ ॥
 
ಮಂಡಲ, ಕಮಂಡಲದ ಭಾರವನ್ನು ಹೊತ್ತು

ಅತಿ ಭಾರ ಪುಸ್ತಕದ ಹೊರೆಯನ್ನು ಹೊತ್ತು

ತರುಣ ಶಿಷ್ಯರ ಗಡಣ ಪಯಣಕ್ಕೆ ಅನುವಾಯ್ತು

ಆಯಾಸದ ಕುರುಹು ಅವರಾರಿಗೂ ಇಲ್ಲ

ದಕ್ಷತೆಯೇ ಮೈವೆತ್ತಿ ನಿಂತ ಆ ಶಿಷ್ಯರಿಗೆ

ಒಪ್ಪಿಸಿದ ಕೆಲಸದಲ್ಲಿ ಅತಿಯಾದ ಆಸಕ್ತಿ
 
॥ ೧೪ ॥
 
ಇಂತು ಆ ಪಯಣಿಗರು ಅಣಿಯಾಗುತಿರಲು
 

ಹೊಸದಾಗಿ ಶಿಷ್ಯಗಣ ಸೇರಿದವನೊಬ್ಬ

ಹೊರೆಯನ್ನು ಬಿಗಿಯುವ ಹಗ್ಗವನ್ನು ಕಾಣದೆ

ಪರದಾಡಿ, ಪರದಾಡಿ, ಎಲ್ಲರಲಿ ಬಂದು

"ಹಗ್ಗವನು ಕಂಡಿರಾ ?" ಎನ್ನುವುದ ಕೇಳಿ

ಮುಳುಗಿದರು ಎಲ್ಲರೂ ನಗೆಗಡಲಿನಲ್ಲಿ
 
216 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥