This page has been fully proofread once and needs a second look.

ಜಗದೆಲ್ಲ ಕ್ರಿಯೆಗಳಿಗೂ ಪ್ರಾಣದೇವರೆ ಮೂಲ

ಎಲ್ಲವೂ ಜರಗುವುವು ಅವರ ಮುಖದಿಂದ

ಅಂತಹ ಕ್ರಿಯೆಗಳಲ್ಲಿ ಯಾವುದದ್ಭುತವೆಂಬ ಪರಿಯಿಲ್ಲ

ಆದರೂ ಬಣ್ಣಿಸುವೆ ಅವರ ಚರಿತೆಯನ್ನು
ನು
ಪುಣ್ಯಶ್ಲೋಕರ ಕಥನದಿಂದಾಗುವುದು ಮನಶುದ್ದಿ.

ಬಾಳ ಸಾರ್ಥಕ್ಯಕ್ಕೆ ಇದುವೆ ಸಿದ್ಧಿ.
 
॥ ೭ ॥
 
ರಚಿಸಲಿರುವೆನು ನಾನು ವಾಯುದೇವರ ಚರಿತೆ
 

ಎಣೆ ಇರದ ರತ್ನಗಳ ಮಾಲೆಯಂತಹ ಚರಿ
ತೆ
ಸೂಕ್ಷ್ಮವಲ್ಲವು ಎನ್ನ ಜ್ಞಾನದೃಷ್ಟಿ

ಕಥನ ಕಾಕ್ಯಾರವು ಸ್ವಲ್ಪ ಕುಂಟಾಗಬಹುದು
 

ಆದರೂ ಎನಗುಂಟು ಅಮಿತ ಉತ್ಸಾಹ
 

ಸಜ್ಜನರು ಮನ್ನಿಸಲಿ ಎನ್ನ ತಪ್ಪುಗಳ
 
॥ ೮ ॥
 
ಶ್ರೀ ಹನುಮದವತಾರ ಲೀಲಾ ವರ್ಣನ

ಕೇಸರಿ ಎಂಬೊಂದು ವಾನರನ ಪತ್ನಿ

ಅಂಜನಾದೇವಿಯಲ್ಲಿ ಜನಿಸಿದನು ಹನುಮ
 

ಶ್ರೀಕಾಂತನಾಣತಿಯ, ದೇವತಾ ಬಿನ್ನಹವ

ಮನ್ನಿಸವತರಿಸಿದನು ಶ್ರೀ ಪ್ರಾಣದೇವ

ಚೇತನಾ ಜಗದೊಡೆಯ, ಇಂದ್ರಿಯಗಳಭಿಮಾನಿ

ದೇವತಾ ಶ್ರೇಷ್ಠ, ಸಜ್ಜನರ ಗಣಕೆಲ್ಲ ಗುರುವರ್ಯ
 
॥ ೯ ॥
 
ಜಗದಲ್ಲಿ ಸದ್ಗುಣಗಳನೇಕವುಂಟು

ಪ್ರತಿಯೊಂದು ಸದ್ಗುಣವು ವಿಶ್ವದಲ್ಲಿ ಮಾನ್ಯ

ಈ ಎಲ್ಲ ಗುಣಗಳಿಗೆ ಹನುಮ ಆದರ್ಶ

ಸಕಲ ಸದ್ಗುಣಭರಿತ ಜೀವೋತ್ತಮ!

ಜ್ಞಾನ ವಿಜ್ಞಾನಗಳ ಅಪ್ರತಿಮ ಸಂಗಮ

ಹನುಮಂತ ನಾಮವಿದು ಅನ್ವರ್ಥವಹುದು
 
ಮೊದಲನೆಯ ಸರ್ಗ / 5
 
7
 
8
 
10
 
॥ ೧೦ ॥