This page has not been fully proofread.

ಜಗದೆಲ್ಲ ಕ್ರಿಯೆಗಳಿಗೂ ಪ್ರಾಣದೇವರೆ ಮೂಲ
ಎಲ್ಲವೂ ಜರಗುವುವು ಅವರ ಮುಖದಿಂದ
ಅಂತಹ ಕ್ರಿಯೆಗಳಲ್ಲಿ ಯಾವುದದ್ಭುತವೆಂಬ ಪರಿಯಿಲ್ಲ
ಆದರೂ ಬಣ್ಣಿಸುವ ಅವರ ಚರಿತೆಯನ್ನು
ಪುಣ್ಯಶ್ಲೋಕರ ಕಥನದಿಂದಾಗುವುದು ಮನಶುದ್ದಿ.
ಬಾಳ ಸಾರ್ಥಕ್ಯಕ್ಕೆ ಇದುವೆ ಸಿದ್ಧಿ.
 
ರಚಿಸಲಿರುವನು ನಾನು ವಾಯುದೇವರ ಚರಿತೆ
 
ಎಣೆ ಇರದ ರತ್ನಗಳ ಮಾಲೆಯಂತಹ ಚರಿತ
ಸೂಕ್ಷ್ಮವಲ್ಲವು ಎನ್ನ ಜ್ಞಾನದೃಷ್ಟಿ
ಕಥನ ಕಾರವು ಸ್ವಲ್ಪ ಕುಂಟಾಗಬಹುದು
 
ಆದರೂ ಎನಗುಂಟು ಅಮಿತ ಉತ್ಸಾಹ
 
ಸಜ್ಜನರು ಮನ್ನಿಸಲಿ ಎನ್ನ ತಪ್ಪುಗಳ
 
ಶ್ರೀ ಹನುಮದವತಾರ ಲೀಲಾ ವರ್ಣನ
ಕೇಸರಿ ಎಂಬೊಂದು ವಾನರನ ಪತ್ನಿ
ಅಂಜನಾದೇವಿಯಲ್ಲಿ ಜನಿಸಿದನು ಹನುಮ
 
ಶ್ರೀಕಾಂತನಾಣತಿಯ, ದೇವತಾ ಬಿನ್ನಹವ
ಮನ್ನಿಸವತರಿಸಿದನು ಶ್ರೀ ಪ್ರಾಣದೇವ
ಚೇತನಾ ಜಗದೊಡೆಯ, ಇಂದ್ರಿಯಗಳಭಿಮಾನಿ
ದೇವತಾ ಶ್ರೇಷ್ಠ, ಸಜ್ಜನರ ಗಣಕೆಲ್ಲ ಗುರುವರ್ಯ
 
ಜಗದಲ್ಲಿ ಸದ್ಗುಣಗಳನೇಕವುಂಟು
ಪ್ರತಿಯೊಂದು ಸದ್ಗುಣವು ವಿಶ್ವದಲ್ಲಿ ಮಾನ್ಯ
ಈ ಎಲ್ಲ ಗುಣಗಳಿಗೆ ಹನುಮ ಆದರ್ಶ
ಸಕಲ ಸದ್ಗುಣಭರಿತ ಜೀವೋತ್ತಮ!
ಜ್ಞಾನ ವಿಜ್ಞಾನಗಳ ಅಪ್ರತಿಮ ಸಂಗಮ
ಹನುಮಂತ ನಾಮವಿದು ಅನ್ವರ್ಥವಹುದು
 
ಮೊದಲನೆಯ ಸರ್ಗ / 5
 
7
 
8
 
10