This page has not been fully proofread.

ಶ್ರೀ ಗುರುಭೋ ನಮಃ
ಹದಿಮೂರನೆಯ ಸರ್ಗ
 
ಸಹ್ಯ ಪರ್ವತದಲ್ಲಿ ಆಚಾರ್ಯರು
 
ನಾಲ್ಕು ತಿಂಗಳ ವ್ರತವ ಪೂರೈಸಿದ ಬಳಿಕ
ಆನಂದ ತೀರ್ಥರು ತ್ವರಿತ ಯತ್ನವ ನಡೆಸಿ
ಅಪಹರಿತ ಗ್ರಂಥಗಳ ಮರಳಿ ಸ್ವೀಕರಿಸಿದರು
ಜಯಸಿಂಹ ಭೂಪತಿಯ ವಂದನೆಯ ಸ್ವೀಕರಿಸಿ
ಸಹ್ಯಾದ್ರಿಗೈತಂದರಾ ಶಿಷ್ಯರೊಡಗೂಡಿ
ರಾಜ ನೃತ್ಯನು ಬಂದ ಅಲ್ಲಿಗಾ ಸಮಯದಲ್ಲಿ
 
ನೃತ್ಯನ ಮೂಲಕ ಜಯಸಿಂಹ ರಾಜನ ಪ್ರಾರ್ಥನೆ
ಗುರುಗಳಿಗೆ ನಮಿಸುತ್ತ ಆ ನೃತ್ಯನಾಗ
 
ಇಂತಂದು ನುಡಿದನು ವಿನಯದಲ್ಲಿ ಬಾಗಿ
"ನಮ್ಮ ಭೂಪಾಲನು ಇಂತು ಬಿಸಿಹನು
ತಮ್ಮ ಕಿಂಕರರಾದ ನಮ್ಮೆಲ್ಲರನ್ನೂ
ಪೂಜ್ಯರಾಗಿಹ ತಾವು ಹರಸಬೇಕು
ನಮ್ಮ ಸತ್ಕಾರವನ್ನು ಸ್ವೀಕರಿಸಬೇಕು
 
ಜಯಸಿಂಹರಾಜನ ಪಟ್ಟಣಕ್ಕೆ ಶ್ರೀ ಮಧ್ವಾಚಾರ್ಯರ ಪ್ರಯಾಣ
 
ಪಯಣವನು ಮುಂದರಿಸಿ ಆನಂದ ತೀರ್ಥರು
ಮೂಡಲದ ದಿಸೆಯಿಂದ ಪಡುವಣದ ಕಡೆಗೆ
 
ಅಪ್ರತಿಮ ತೇಜದಲಿ ಶೋಭಿಸುತ ನಡೆದು
ಸೂರ್ಯಕಿರಣದ ತೆರದಿ ಪಾದಗಳನಿರಿಸುತ್ತ
ಸ್ಪರ್ಶ ಮಾತ್ರದಿ ಬುವಿಯ ಪಾವನವಗೊಳಿಸುತ್ತ
ಭವ್ಯತೆಯ ಸಾರುತ್ತ ನಡೆದರಾ ಗುರುಗಳು
 
1
 
2
 
3