This page has been fully proofread once and needs a second look.

ಐತರೇಯದ ವಾಕ್ಯ "ಅಗ್ನಿನಾ ರಯಿಮಶ್ನವತ್

ಪದವಿಭಾಗವು ಸ್ವಲ್ಪ ಜಟಿಲವಾಗಿಹುದು

ತಪ್ಪಾಗಿ ಹೇಳಿದರೆ ಆಭಾಸವಾಗುವುದು

ವ್ಯಾಕರಣ " ಪಂಡಿತ" ಪುಂಡಲೀಕನು ಆಗ

ತಪ್ಪು ತಪ್ಪಾಗಿದನು ವ್ಯಾಖ್ಯಾನಿಸಿದನು

ತುಂಬಿದ ಸಭೆಯಲ್ಲಿ ನಿಂದೆಗೊಳಗಾದನು
 
॥ ೪೦ ॥
 
ಆ ಮೊದಲು ಪಂಡಿತರ ಸಭೆಗಳಲ್ಲೆಲ್ಲಾ

ಶಾರ್ದೂಲನೆಂದೇ ಖ್ಯಾತಿಯನ್ನು ಗಳಿಸಿದ್ದ

ಪುಂಡರೀಕ ಪುರಿ ಎಂಬ ಆ ಧೂರ್ತ ಗೋಮಾಯು
 

ದುರ್ವಾದಿ ಎಂಬುವ ವ್ಯಾಘ್ರರನು ವಧಿಸುವ

ಗುರು ಮಧ್ವ ಸಿಂಹರನು ಎದುರಿಸಲು ಹೋಗಿ

ಹೆಸರಿನಲ್ಲಿ ಶಾರ್ದೂಲ ಮಾತ್ರದಂತಾದನು
 
॥ ೪೧ ॥
 
ಪದ್ಮ ತೀರ್ಥಾದಿಗಳಿಂದ ಮಧ್ವಗ್ರಂಥಗಳ ಅಪಹರಣ

 
"ಶ್ರೀ" ಎಂಬ ಹೆಸರಿಂದ ದೌದ್ರೌಪದಿಯು ಖ್ಯಾತಳು

"ಶಾಸ್ತ್ರ" ವೆಂಬುದು ಅವಳ ಮತ್ತೊಂದು ಹೆಸರು

ಸುಜ್ಞಾನಿ ಭೂಸುರರು ಆಕೆಯನ್ನು ಪಾಲಿಪರು

ಪದ್ಮತೀರ್ಥ ಎಂಬ ದುಷ್ಟ ಸೈಂಧವನೊಬ್ಬ
ದೌ

ದ್ರೌ
ಪದಿಯ ಅಪಹರಿಸಿ ಕೊಂಡೊಯ್ಯುತಿಹನೆಂದು

ಮಧ್ವರೆಂಬುವ ಆ ಪಾರ್ಥ ಕೇಳಿದನು
 
ಜೇ
॥ ೪೨ ॥
 
ಜ್ಯೇ
ಷ್ಠಯತಿಗಳ ಕೂಡಿ ಆನಂದ ತೀರ್ಥರು

ಹಲವಾರು ಯೋಜನದ ದೂರವನು ಕ್ರಮಿಸಿ
 

ಪ್ರಾಗ್ರ್ಯವಾಟದಿ ಪದ್ಮತೀರ್ಥನನು ಸಂಧಿಸಿ

ವಾಗ್ದಾಬಾಣದಿಂದವನ ಅಂಜಿಸುತ ತಡೆದು

ಸಿರಿದೇವಿಯನ್ನವರು ಹಿಂದಿರುಗಿ ಪಡೆದು

ಹಾಸ್ಯ ಮಾಡಿದರವನ ವಾದ ವೈಖರಿಯ
 
ಹನ್ನೆರಡನೆಯ ಸರ್ಗ / 207
 
40
 
41
 
42
 
43
 
॥ ೪೩ ॥