This page has been fully proofread once and needs a second look.

ಆನಂದ ತೀರ್ಥರ ವೇದವ್ಯಾಖ್ಯಾನಗಳು,

ವಾಕ್ಯ ಉಚ್ಚಾರಣೆಯು ಅತಿ ಮಧುರವಹುದು

ಎಲ್ಲವೂ ಸುಸ್ಪಷ್ಟ: ಕೇಳುಗರಿಗತಿ ಹಿತವು

ವಾಗ್ಗೇದೇವಿ ಸರಸ್ವತಿ, ದೇವಗುರು, ಗರುಡರೂ

ಆಶ್ಚರ್ಯದಿಂದದನು ಬಣ್ಣಿಸುವರು

ನನ್ನಂಥ ಪಾಮರನು ಇನ್ನೆಂತು ಬಣ್ಣಿಪೆನು ?
 
॥ ೩೬ ॥
 
ಇಂದ್ರಪುರಿಯ ಪರಾಭವ
 

 
ಉಲ್ಲಸಿತ ಚಿತ್ತರೂ ನಗೆಮೊಗದ ಬ್ರಾಹ್ಮಣರು

ಕಂಗೊಳಿಸಿ ಮೆರೆದಿದ್ದ ಆ ವಿಬುಧ ಸಭೆಯಲ್ಲಿ

ನಾಲ್ಮೊಗದ ಬ್ರಹ್ಮನ ಹೋಲುವಾ ಪರಿಯಲ್ಲಿ

ಆನಂದ ತೀರ್ಥರು ಅರ್ಥ ಗರ್ಭಿತವಾಗಿ

ಶೃತಿಸಮೂಹವನು ವ್ಯಾಖ್ಯಾನಿಪುದ ಕೇಳಿ

ಪುಂಡರೀಕನ ಕುರಿತು ವಿಪ್ರರಿಂತೆಂದರು
 
॥ ೩೭ ॥
 
"ಈ ಮಧ್ವಮುನಿಗಳು ಪರಿಪೂರ್ಣ ಪ್ರಜ್ಞರು

ಪರಿಪೂರ್ಣ ಪ್ರಜ್ಞೆಯಲಿ ವೇದಾರ್ಥ ನುಡಿದಿಹರು

ಇಂತಹ ಅದ್ಭುತವ ನಾವೆಂದೂ ಕೇಳಿಲ್ಲ

ಇಂಥ ಸುಜ್ಞಾನಿಗೆ ಎದುರಾಳಿಯೆ ನೀನು ?

ದಯಮಾಡಿ ಇಂತಹುದೇ ಅದ್ಭುತ ವ್ಯಾಖ್ಯಾನವನು

ನಮಗಾಗಿ ಶೃತಪಡಿಸು ಎಂದು ಬೇಡುವೆವು'
 
" ॥ ೩೮ ॥
 
ಬ್ರಾಹ್ಮಣರ ಮನವಿಯನು ಕೇಳಿದಾ ದುರುಳನು

ಮಧ್ವಮುನಿಗಳ ಸಾಮ್ಯ ಪಡೆವುದಕೆ ಯತ್ನಿಸುತ

ಹಿಂದೊಮ್ಮೆ ಕೃಷ್ಣನ ಸಾಮ್ಯವನ್ನು ಬಯಸುತ್ತ

ಗರುಡವಾಹನವನ್ನು, ನಾಲ್ಕು ತೋಳುಗಳನ್ನು

ಶ್ರೀವತ್ಸ ಚಿಹ್ನೆಯನೂ ಕೃತಕದಲ್ಲಿ ಪಡೆದಿದ್ದ

ಪೌಂಡ್ರಕನ ಪರಿಯಲ್ಲಿ ನಗೆಪಾಟಲಾದನು
 
206 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥