This page has been fully proofread once and needs a second look.

ಆನಂದ ತೀರ್ಥರು ತೇಜೋವಿಲಾಸಿಗಳು

ಅಗ್ನಿಯ ಜ್ವಾಲೆಯಂತವರ ಆ ತೇಜಸ್ಸು

ಪುಂಡರೀಕನು ಒಂದು ಮಿಣಕು ಹುಳುವಂತೆ
 

ಅತ್ಯಂತ ಚಂಚಲನು, ಅತಿ ಅಪ್ರಬುದ್ಧನು

ಆದರೂ ಅವರವನ ಕಡೆಗಣಿಸಲಿಲ್ಲ

ಅವನೂಡನೆ ವಾಗ್ಯುದ್ಧ ಪ್ರಾರಂಭಿಸಿದರು
 
॥ ೨೮ ॥
 
ಶ್ರೀ ಮಧ್ವಾಚಾರ್ಯರ ಅಪೂರ್ವ ವೇದಪಾಠ

 
ವೇದಾದಿ ವಿದ್ಯೆಯಲ್ಲಿ ಅತಿ ಚತುರ ಮಧ್ವರು

ವೇದ ಪ್ರಮಾಣಗಳ ಸರ್ವ ಭೂಷಿತರವರು

ತಮ್ಮೊಡನೆ ವಾಕ್ಯಾರ್ಥ ಸುಳಿಯಲ್ಲಿ ಸಿಲುಕಿದ

ಪುಂಡರೀಕನನವರು ಸುಲಭದಲ್ಲಿ ಗೆಲಿದರು

ತಮ್ಮ ಸಿದ್ಧಾಂತಕ್ಕೆ ಕನ್ನಡಿಯ ತೋರಿದರು

ವೇದ ವ್ಯಾಖ್ಯಾನವನ್ನು ಮತ್ತೊಮ್ಮೆ ಮಾಡಿದರು
 
॥ ೨೯ ॥
 
ರೂಪ ಪೀಠಾಪುರದ ಬ್ರಾಹ್ಮಣರು ಬಂದು

ಸಭೆಯಲ್ಲಿ ಸೇರಿದರು ಗೌರವದಿ ನಿಂದು

ಅಪ ಪಾಠಗಳು ಅವರ ಸನಿಹದಲಿ ಸುಳಿಯುವು

ಪಠಣಾದಿ ಕ್ರಿಯೆಗಳಲ್ಲಿ ಎಲ್ಲರೂ ಮುಂದು

ಅಂತಹ ಬ್ರಾಹ್ಮಣರು ಮಧ್ವರನು ಕಂಡು

ಕೌತುಕದಿ ನೋಡಿದರು ವೇದವ್ಯಾಖ್ಯಾತೃವನು
 
॥ ೩೦ ॥
 
ಸ್ವರಗಳನ್ನು ಉಚ್ಚರಿಪ ಸೊಬಗಿನ ಬೆಡಗು !

ಮಾತ್ರೆಗಳ ಅಭಿವ್ಯಕ್ತಿಯಲ್ಲಿನ ಸೊಗಸು !

ಪಶ್ಯಂತಿ, ಮಧ್ಯಮ, ವೈಖರಿಗಳೆಂಬುವ

ತ್ರಿಸ್ಥಿತಿಯ ಅಭಿಮಾನಿ ದೇವತೆಗಳೆಲ್ಲ

ಆಚಾರ್ಯ ಮುಖದಿಂದ ಹೊಮ್ಮುವ ವಾಕ್ಯಗಳ

ಕೇಳಿ ನಲಿದಾಡುತ್ತ ಸ್ಮರಿಸಿದರು ಶ್ರೀ ಹರಿಯ ಆನಂದದಿಂದ
 
204 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥