This page has been fully proofread once and needs a second look.

ಮಧ್ಕೀರ್ತಿಯ ಮಹಿ
 
ಮೆ
 
ಜಾಜ್ವಲ್ಯ ಪ್ರಭೆಯಿಂದ ಬೆಳಗಿಹುದು ನೋಡಿ

ಮೂರ್ಲೋಕದಾಚಿಚೆಯೊಳು ಗುರುಮಧ್ವರಾ ಕೀರ್ತಿ

ಅಂತರಂಗದಿ ಇರುವ ಅಜ್ಞಾನ ತಿಮಿರವನ್ನು
ನು
ಬಡಿದೋಡಿಸುವೀ ಪ್ರಭೆಯು ರವಿಗಿಂತ ಮಿಗಿಲು

ಕರುಣಿಸಲಿ ಎಮಗಿಂದು ಗುರು ಮಧ್ವ ಜ್ಯೋತಿಯು

ಪರಿಶುದ್ಧ ಅರಿವಿನ ಒಳಗಣ್ಣ ನೋಟವನು
 
॥ ೩ ॥
 
ತ್ರಿವಿಕ್ರಮ ಪಂಡಿತ ವಂದ
 
ನೆ
 
ಎನ್ನ ಪಿತ ತ್ರಿವಿಕ್ರಮ ಪಂಡಿತರಾ ಮುಖದಿಂದ

ಹೊರಹೊಮ್ಮಿದಾ ಕಾವ್ಯ "ತತ್ವ ಪ್ರದೀಪ
"
ನೀಡುವುದು ಸಜ್ಜನರಿಗಾನಂದವನ್ನು

ಆ ನನ್ನ ಜನಕ, ಆ ನನ್ನ ಗುರುವನ್ನು

ಮನಸಾರೆ ವಂದಿಸುವೆ ಭಯಭಕ್ತಿಯಿಂದ

ಕರುಣಿಸಲಿ ಗುರುವರ್ಯ <error>ಮಂಗಳವನೆಮಗೆ
 
</error><fix>ಮಂಗಳವೆನಮಗೆ</fix> ॥ ೪ ॥
 
ವಿಷಯ ಪ್ರಯೋಜನಾದಿ ಕಥನ
 

 
ಗುರುಭಕ್ತಿಯಿಂದಲೇ ಹರಿಭಕ್ತಿ ದೊರೆಯುವುದು.

ಹರಿಭಕ್ತಿ ನೀಡುವುದು ಮುಕುತಿಯ ಮುದವ.

ಸಕಲ ಜಗಕೆಲ್ಲ ವಾಯುದೇವರೇ ಗುರುವು

ಅವರ ಮಹಿಮೆಯ ಅರಿವು ನಮಗಾಗಬೇಕು

ಅದಕಾಗಿ ಬಣ್ಣಿಸುವೆ ಅವರ ಲೀಲೆಗಳನ್ನು

ವಾಯುದೇವರ ದಿವ್ಯ ಅವತಾರವನ್ನು
 
॥ ೫ ॥
 
ಸ್ವಾಹಂಕಾರ ಖಂಡನ
 

 
ವೇದಮಂತ್ರಗಳಿಂದ ಸುಸ್ತುತ್ಯವಾಗಿರುವುದು.

ರುದ್ರೇಂದ್ರ ದೇವಗಣ ಪೊಗಳುವಂತಹುದು.

ವಾಯುದೇವರ ಮಹಿಮೆ ಬಣ್ಣನೆಗೆ ನಿಲುಕದು.

ಅಂತಹ ಸಾಹಸಕೆ ಹೊರಟಿಹೆನು ನಾನು.

ನಾನೊಬ್ಬ ಮಂದಮತಿ, ಭಾಷೆಯಲಿ ಬಡವ

ಸದ್ಭಕ್ತರೆಲ್ಲರೂ ಕ್ಷಮೆ ತೋರಿ ಹರಸಿ.
 
4 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
3
 
5
 
6
 
॥ ೬ ॥