This page has not been fully proofread.

ಮಧ್ಯಕೀರ್ತಿಯ ಮಹಿಮ
 
ಜಾಜ್ವಲ್ಯ ಪ್ರಭೆಯಿಂದ ಬೆಳಗಿಹುದು ನೋಡಿ
ಮೂರ್ಲೋಕದಾಚಿಯೊಳು ಗುರುಮಧ್ವರಾ ಕೀರ್ತಿ
ಅಂತರಂಗದಿ ಇರುವ ಅಜ್ಞಾನ ತಿಮಿರವನ್ನು
ಬಡಿದೋಡಿಸುವೀ ಪ್ರಭೆಯು ರವಿಗಿಂತ ಮಿಗಿಲು
ಕರುಣಿಸಲಿ ಎಮಗಿಂದು ಗುರು ಮಧ್ವ ಜ್ಯೋತಿಯು
ಪರಿಶುದ್ಧ ಅರಿವಿನ ಒಳಗಣ್ಣ ನೋಟವನು
 
ತ್ರಿವಿಕ್ರಮ ಪಂಡಿತ ವಂದನ
 
ಎನ್ನ ಪಿತ ತ್ರಿವಿಕ್ರಮ ಪಂಡಿತರಾ ಮುಖದಿಂದ
ಹೊರಹೊಮ್ಮಿದಾ ಕಾವ್ಯ "ತತ್ವ ಪ್ರದೀಪ
ನೀಡುವುದು ಸಜ್ಜನರಿಗಾನಂದವನ್ನು
ಆ ನನ್ನ ಜನಕ, ಆ ನನ್ನ ಗುರುವನ್ನು
ಮನಸಾರೆ ವಂದಿಸುವೆ ಭಯಭಕ್ತಿಯಿಂದ
ಕರುಣಿಸಲಿ ಗುರುವರ ಮಂಗಳವನೆಮಗೆ
 
ವಿಷಯ ಪ್ರಯೋಜನಾದಿ ಕಥನ
 
ಗುರುಭಕ್ತಿಯಿಂದಲೇ ಹರಿಭಕ್ತಿ ದೊರೆಯುವುದು.
ಹರಿಭಕ್ತಿ ನೀಡುವುದು ಮುಕುತಿಯ ಮುದವ.
ಸಕಲ ಜಗಕೆಲ್ಲ ವಾಯುದೇವರೇ ಗುರುವು
ಅವರ ಮಹಿಮೆಯ ಅರಿವು ನಮಗಾಗಬೇಕು
ಅದಕಾಗಿ ಬಣ್ಣಿಸುವೆ ಅವರ ಲೀಲೆಗಳನ್ನು
ವಾಯುದೇವರ ದಿವ್ಯ ಅವತಾರವನ್ನು
 
ಸ್ವಾಹಂಕಾರ ಖಂಡನ
 
ವೇದಮಂತ್ರಗಳಿಂದ ಸುತ್ಯವಾಗಿರುವುದು.
ರುದ್ರೇಂದ್ರ ದೇವಗಣ ಪೊಗಳುವಂತಹುದು.
ವಾಯುದೇವರ ಮಹಿಮೆ ಬಣ್ಣನೆಗೆ ನಿಲುಕದು.
ಅಂತಹ ಸಾಹಸಕ ಹೊರಟಿಹೆನು ನಾನು.
ನಾನೊಬ್ಬ ಮಂದಮತಿ, ಭಾಷೆಯಲಿ ಬಡವ
ಸದ್ಭಕ್ತರೆಲ್ಲರೂ ಕ್ಷಮೆ ತೋರಿ ಹರಸಿ.
 
4 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
3
 
5
 
6