This page has been fully proofread once and needs a second look.

"ಹಳ್ಳಿ ಹಳ್ಳಿಗಳಲ್ಲಿ ತಡೆಯೊಡ್ಡ ಬೇಕು

ಸಾಮವೇ ಮುಂತಾದ ಯುಕ್ತಿಗಳ ಬಳಸಿ

ಹಳ್ಳಿಗರು ಅವರಿಗೆ ಗೌರವಾದರಗಳನ್ನು
ನು
ಸಲ್ಲಿಸುವ ಕಾರ್ಯವನ್ನು ನಿಲ್ಲಿಸಲೇ ಬೇಕು
 

ಮಾನಾಪಹರಣವನು ಮಾಡಬೇಕು
 

ಗ್ರಂಥ ಚೌರ್ಯವ ಮಾಡಿ ಬುದ್ಧಿ ಕಲಿಸಲಿಬೇಕು "
 
॥ ೨೪ ॥
 
ಕುಟಿಲ ಬುದ್ಧಿಯನುಳ್ಳ ಆ ಮಾಯಾವಾದಿಗಳು

ಚಕ್ರಧಾರಿಯ ಭಕ್ತ ಗುರುಮಧ್ವರನು ಆಗ

ಎದುರಾಳಿಗಳನ್ನಾಗಿ ಭಾವಿಸಿದರು.

ಇಲ್ಲವಾದಲ್ಲವರು ದುಃಖವೆಂಬುವ ಉಗ್ರ

ಜಲದಿಂದ ಕೂಡಿದ ಅಂಧತಾಮಿಶ್ರದ
ಸ್ರದ
ಸಾಗರದಿ ಮುಳುಗಲು ಅರ್ಹರಾಗುವರೆ ?
 
॥ ೨೫ ॥
 
ರೂಪ್ಯ ಪೀಠಾಪುರದಿ ಆ ಮಾಯಾವಾದಿಗಳು

ಜನತೆಯ ಜೊತೆಯಲ್ಲಿ ಮಿಳಿತಗೊಂಡಿದ್ದು

ವಾಕ್ಯಾರ್ಥ ನೆಪದಲ್ಲಿ ಆನಂದತೀರ್ಥರನು
 

ಅಪಮಾನಗೊಳಿಸುವ ಸಂಚು ಒಂದನು ಹೂಡಿ
 

ಪುಂಡರಿಕ ಪುರಿಯೆಂಬ ಹರಿವೈರಿಯೊಬ್ಬನನು

ಮಧ್ವರ ಎದುರಿನಲಿ ವಾದಕಣಿಗೊಳಿಸಿದರು
 
॥ ೨೬ ॥
 
ಕೇಸರಿಯ ಎದುರೊಂದು ಶ್ವಾನ ಸೆಣಸಿದ ತೆರದಿ

ಹಂಸ ಪಕ್ಷಿಯ ಎದುರು ಕಾಗೆ ಸೆಣಸಿದ ತೆರದಿ

ನರಿಯೊಂದು ಹುಲಿಯೊಡನೆ ಹೋರಾಡಿದ ತೆರದಿ
 

ಆ ಮೂಢ ಪುಂಡರಿಕ ವ್ಯರ್ಥ ಶ್ರಮವನ್ನು ವಹಿಸಿ

ವಿದ್ವದ್ವರೇಣ್ಯ ಆ ಮಧ್ವಮುನಿಗಳನು

ಶಾಸ್ತ್ರಾರ್ಥ ವಾಗ್ಯುದ್ಧಕಾಮಂತ್ರಿಸಿದನು
 
ಹನ್ನೆರಡನೆಯ ಸರ್ಗ / 203
 
24
 
25
 
20
 
27
 
॥ ೨೭ ॥