This page has been fully proofread once and needs a second look.

"ಮಂದಹಾಸವ ಸೂಸಿ ಶೋಭಿಸುವ ಮೂರುತಿ

ಮಧ್ವಮುನಿಗಳ ಕಂಡ ಜನರು ಉಸುರುವರು

'ಇವರೇನು ಸಾಕ್ಷಾತ್ತು ವ್ಯಾಸಮುನಿವರ್ಯರೋ

ವೇದಗಳೆ ಮೈವೆತ್ತಿ ಇಳೆಗಿಳಿದ ಮಹಿಮರೋ'

ಇಂಥ ಮಾತನು ಕೇಳಿ ನಮಗಿಂದು ಅನಿಸುತಿದೆ

ಮಾಯಾವಾದದ ಮೂಲ ತತ್ತರಿಸಿ ಬೀಳುತಿದೆ
 
॥ ೧೨ ॥
 
"ನಮ್ಮ ಪಕ್ಷದ ಕೆಲರು ಹೀಗೆ ನುಡಿಯುತಲಿಹರು

"ಮಧ್ವಮುನಿ ರಚಿಸಿರುವ ಬ್ರಹ್ಮಸೂತ್ರದ ಭಾಷ್ಯ

ಅಕ್ಲಿಷ್ಟವಾಗಿಹುದು, ಋಜು ಮಾರ್ಗದಲ್ಲಿಹುದು

ನಮಗೇನು ಕ್ಷತಿ ಇರದು ಈ ಭಾಷ್ಯದಿಂದ
"
ಇಂತೆಂದು ಹೇಳುತ್ತ ಆ ನಿರ್ಲಜ್ಜ ಜನರು

ಮುಳುಗಿಸಿಹರೆಮ್ಮನ್ನು ಲಜ್ಞಾಜಾ ಸಮುದ್ರದಲ್ಲಿ
 
॥ ೧೩ ॥
 
"ಮಧ್ವಮುನಿ ಶಿಷ್ಯರು ಸೌಜನ್ಯ ಶೀಲರು

ಶಂಖ, ಚಕ್ರವ ತೊಟ್ಟ ವೈಷ್ಣವಾಗ್ರಣಿಗಳು

ಈ ಶಿಷ್ಯ ಜಾಲಗಳು ಸಭೆಯೆಂಬ ಸಾಗರದಿ
ಶೋ

ಶ್ರೋ
ತೃಮನವೆಂಬುವ ಜಲಚರಗಳನ್ನು

ಸೆರೆಹಿಡಿಯದಂತಿರುವ ಯಾವುದಾದರೂ ಒಂದು

ಯುಕ್ತಿಯನ್ನು ನಮ್ಮಗಳ ಕ್ಷೇಮಕ್ಕೆ ಯೋಚಿಸಿರಿ
 
" ॥ ೧೪ ॥
 
"ಬ್ರಹ್ಮ ಸಗುಣತ್ವವನು ಸಾರುವರು ಇವರು

ನಿರ್ಗುಣ ಬ್ರಹ್ಮನನು ಖಂಡಿಸುವರಿವರು

ಹಂಸಗಳ ಧ್ವನಿಯನ್ನು ಅಡಗಿಸುವ ಮುಗಿಲುಗಳು

ಜಲಧಾರೆ ಸುರಿಸುತ್ತ ಶರಧಿ ಉಕ್ಕಿಸುವಂತೆ

ನಮ್ಮ ಪಕ್ಷದ ಸೊಲ್ಲ ಅತಿಯಾಗಿ ಅಡಗಿಸುತ

ಸಗುಣ ಬ್ರಹ್ಮನ ವಾದ ಬಲವಾಗಿ ಸಾರಿಹರು
 
200 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
" ॥ ೧೫ ॥