This page has been fully proofread once and needs a second look.

"ಮಾಯಾವಾದವದು ದುರ್ಗಮದ ಕಾನನವು

ಭಾಟ್ಟ ಮೀಮಾಂಸಕರು ಇದರಲ್ಲಿ ಭ್ರಷ್ಟರು

ಪ್ರಭಾಕರನ ಪ್ರಭೆಯೆಲ್ಲ ಇದರಲ್ಲಿ ನಿಂದಿಹುದು

ಇದ ಕಂಡು ಬೌದ್ರು ಭೀತಿಗೊಂಡಿಹರು
 

ಇಂತಹ ಕಾನನವ ಸುಡಲು ಮುಂದಾಗಿರುವ
 

ತತ್ವವಾದಾಗ್ನಿಯನ್ನು ಕಡೆಗಣಿಸಬಹುದೆ ?
 
॥ ೮ ॥
 
"ನಮ್ಮ ನಾಯಕರಾದ ಶ್ರೀ ಪದ್ಮತೀರ್ಥರು

ಮಧ್ವ ಮುನಿಗಳು ಸೇರಿ ಹೊರ ಹೊರಟ ಸ್ಥಳದಿಂದ

ಮುನ್ನಡೆದು ಬರದಿರಲು ಪಣವ ತೊಟ್ಟಿದ್ದರು

ಆದರದು ಮಧ್ವರನು ತಡೆಯದೆ ಹೋಯ್ತು

ಮುನ್ನುಗ್ಗಿ ಮುನ್ನುಗ್ಗಿ ಬರುತಲೇ ಇಹರವರು

ಅಕಟಕಟ ! ನಾವೆಂಥ ನತದೃಷ್ಟರಾಗಿಹೆವು !
 
॥ ೯ ॥
 
'ಪ್ರತಿವಾದಿ ಪ್ರಶ್ನೆಗೆ ಉತ್ತರವು ಸಿದ್ಧ

ಬೇರಾರೂ ಖಂಡಿಸಲು ಸಾಧ್ಯವಿಲ್ಲದ ಪ್ರಶ್ನೆ

ಮಧ್ವಮುನಿ ಬಿಡಿಸುವರು ಚತುರೋಕ್ತಿಯಿಂದ

ಪ್ರತಿವಾದಿ ಗುಂಪನ್ನು ಲಜ್ಜೆಗೊಳಪಡಿಸುವರು

ಇಂತಹ ಮಾತುಗಳು ಎಲ್ಲೆಲ್ಲೂ ಕೇಳುತಿವೆ

ನಾವೀಗ ಮಾಡುವುದು ಏನೆಂಬ ಅರಿವಿಲ್ಲ
 
॥ ೧೦ ॥
 
"ಸಪಾದ ಲಕ್ಷದ ಸಂಖ್ಯೆಗಳ ಶ್ಲೋಕಗಳು

ಅತಿ ಪುರಾತನವಹುದು ಈ ಮಾಯಾವಾದ

ಇಂತಹ ಶಾಸ್ತ್ರವನ್ನು ಆನಂದ ತೀರ್ಥರು

ಒಂದೆರಡು ವಾಕ್ಯದಲ್ಲಿ ಖಂಡಿಸುತ್ತಿಹರು

ಇಂತೆಂಬ ಮಾತುಗಳ ಹೇಳುವರು ಪಾಂಥರು

ಇದರಿಂದ ನೊಂದಿರುವ ನಾ ಬಂದೆ ನಿಮ್ಮ ಬಳಿ
 
ಹನ್ನೆರಡನೆಯ ಸರ್ಗ / 199
 
8
 
9
 
10
 
11
 
॥ ೧೧ ॥