This page has been fully proofread once and needs a second look.

"ಮಾಯಾವಾದವು ತುಂಬ ಪ್ರಾಚೀನವಾದುದು

ದೌರ್ಘಟ್ಯ ಭೂಷವು ಅತ್ಯಪೂರ್ವವು

ಶಂಕರರ ಶಾಸ್ತ್ರವು ಅಚ್ಚರಿಯ ಶಾಸ್ತ್ರವು

ಈ ಜಗವು ಮಿಥ್ಯ ಎಂಬುದನ್ನು ಸಾರುವುದು

ಬ್ರಹ್ಮವಸ್ತುವು ಏಕ ಎಂಬುವುದು ಅದರರ್ಥ

ಶೃತಿ ವಾಕ್ಯಗಳು ಕೂಡ ಇವುಗಳನೆ ಹೇಳುವುವು
 
॥ ೪ ॥
 
"ಈ ಜಗದಿ ಭೇದಗಳು ಎಲ್ಲರಿಗೂ ವಿದಿತ

ಮರ್ತ್ಯ, ಸುರ, ದಾನವರು, ವಿಪ್ರ, ಚಂಡಾಲರೂ

ಎಲ್ಲರೂ ಇರುತಿರುವ ಈ ವಿಶ್ವವೆಲ್ಲ

ಭೇದಯುಕ್ತವು ಎಂದು ಜನಮಾನ್ಯವಾಗಿಹುದು

ಮಾಯಾವಾದದ ತತ್ವದಾಶ್ರಯವ ಪಡೆದು

ನಿರ್ಭೇದ ತತ್ವವನು ದೃಢದಿ ಸಾಧಿಸಬಹುದು
 
॥ ೫ ॥
 
"ಪಾಮರರ ಮನದಲ್ಲಿ ಅಜ್ಞಾನವಿದ್ದಾಗ

ಜಗವೆಲ್ಲ ಸತ್ಯ ಎಂಬಂತೆ ತೋರುವುದು

ಮನದಲ್ಲಿ ಅಜ್ಞಾನ ಅಳಿದಾಗ ಮಾತ್ರ

ಸುಟ್ಟ ಬಟ್ಟೆಯ ತೆರದಿ ಮಿಥ್ಯತೆಯ ಅರಿವಹುದು

ತಪ್ ಲೋಹದ ಮೇಲೆ ಬಿದ್ದ ನೀರಂತಿರುವ

ಜಗದ ಮಿಥ್ಯತ್ವವನು ಶಂಕರರು ಸಾರಿಹರು
 
॥ ೬ ॥
 
ಜ್ಞಾನಿ ಶ್ರೇಷ್ಠನ ತರಹ ಶ್ರೇಷ್ಠ ವಿಜ್ಞಾನಿಗಳು

ಮತ್ತಿತರ ಇಂದಿನ ಎಲ್ಲ ವಿಜ್ಞಾನಿಗಳು

ನಿರ್ಗುಣ ಬ್ರಹ್ಮೈಕ್ಯ ಸಾಧಿಸುತ್ತಿಹರು

ಇಂತಹ ಸಮಯದಲಿ ಓ ನಮ್ಮ ನಾಯಕರೆ

ಆಲಿಸಿರಿ ಈ ನನ್ನ ರೋಷದಾಕ್ರಂದನವ
 

ಹಾ ಹಾ ಮಾಯಾವಾದ ನಾಶಗೊಳುತಿದೆಯಲ್ಲ
 
198 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥