This page has been fully proofread once and needs a second look.

ಶ್ರೀ ಗುರುಭೋಭ್ಯೋ ನಮ:
 

 
ಹನ್ನೆರಡನೆಯ ಸರ್ಗ
 

 
ಮಾಯಾವಾದಿಗಳಿಗಾದ ವಿಷಾದ
 

 
ಮಧ್ವಮುನಿಗಳು ಒಬ್ಬ ವೇದಾಂತಿ ಸಿಂಹರು
 

ವ್ಯಾಖ್ಯಾನ ಪ್ರವಚನದಿ ವಿಜೃಂಭಿಸುವರು

ಪ್ರತಿವಾದಿ ಎಂಬುವ ಕಾಡಾನೆಗಳಿಗೆಲ್ಲ

ಭಯವನ್ನು ಹುಟ್ಟಿಸುತ ಕಾಡುವವರವರು

ಆನಂದ ತೀರ್ಥರ ಸಿಂಹ ಗರ್ಜನೆಯಿಂದ

ಕೋಭೆಗೊಂಡಿತು ಅಲ್ಲಿ ಮಾಯಿಗಳ ನರಿಹಿಂಡು
 
॥ ೧ ॥
 
ಅವರು ನಡೆಸಿದ ಸಭೆಯ ಪೂರ್ವಾಪರ
 

 
ಭುವನ ಭೂಷಣರಾದ ಆ ವಾಯುದೇವರಲಿ

ಚೋಲಜ ದ್ವೀಪಿಗಳು ಮುಂತಾದ ಪಾಪಿಗಳು

ಅತಿಯಾದ ಮಾತ್ಸರ್ಯ ಮಧ್ವರಲಿ ತಳೆದು

ಹಿಂದೊಮ್ಮೆ ಮರುಳರು ಕುರುಪತಿಯ ಬಳಿಯಲ್ಲಿ

ವಂಚನೆಯ ಸಂಚುಗಳ ನಡೆಸಿದ ಹಾಗೆ
 

ಮಧ್ವರನು ತಗ್ಗಿಸುವ ಸನ್ನಾಹ ನಡೆಸಿದರು
 
॥ ೨ ॥
 
ಇಂತು ಆ ವಂಚಕರ ಸಂಚಿನ ಸಭೆಯಲ್ಲಿ

ಗಾಂಧಾರ ದೇಶದ ರಾಜಪುತ್ರನ ತೆರದಿ

ಕುಟಿಲ ನೀತಿಗಳಲ್ಲಿ ನಿಷ್ಣಾತನಾಗಿದ್ದ

ವಾಚಾಳಿಯೋರ್ವನು ಎದ್ದು ನಿಲ್ಲುತ್ತ

ಸಜ್ಜನರ ವಿಷಯದಲ್ಲಿ ಮಾತ್ಸರ್ಯ ತುಂಬುತ್ತ

ಪದ್ಮತೀರ್ಥನಿಗವನು ಇಂತೆಂದು ಉಸುರಿದನು
 
1
 
2
 
3
 
॥ ೩ ॥