This page has been fully proofread once and needs a second look.

ವೈಕುಂಠ ವಾಸಿಗಳು ಬಲುಬಗೆಯ ಪರಿಣತರು

ಯಜ್ಞಶೀಲರು ತಮ್ಮ ಯಜ್ಞ ಕಾರ್ಯಗಳಿಂದ

ಯಜ್ಞನಾಮಕ ಹರಿಯ ಆರಾಧಿಸುವರು

ಪ್ರವಚನದ ಪಟುಗಳು ಹರಿಯ ಪಾರಮ್ಯಕರು

ಗಾನಲೋಲನ ಸ್ತುತಿಸಿ ಗಾಯಕರು ಹಾಡುವರು

ವಿಧ್ಯಬದ್ರು ಇವರು, ಆನಂದ ಸಾಂದ್ರರು
॥ ೭೬ ॥
 
ವೈಕುಂಠ ವಾಸಿಗಳ ಶೋಭಾ ವಿಶೇಷ

ಮಾತು, ಮನಗಳಿಗೆಂದೂ ನಿಲುಕದಂತಹವು

ಸಾಕ್ಷಾತ್ತು ಹರಿಯಿಂದ ಸನ್ನಿಹಿತವಾದ

ಶ್ರೀ ಲಕುಮಿ, ಬ್ರಹೇಂಹ್ಮೇಂದ್ರ ರುದ್ರಾದಿ ದೇವಗಣ

ಗರುಡ ಶೇಷಾದಿಗಳ ಮತ್ತೆಲ್ಲ ಮುಕ್ತರ

ಲೋಕದಲಿ ಈ ಹಿರಿಮೆ ಅತಿ ಯುಕ್ತವಹುದು
॥ ೭೭ ॥
 
ವೈಕುಂಠದ ಹಿರಿಮೆ
 

 
ವೈಕುಂಠ ಲೋಕವದು ಸಂಕಲ್ಪ ಲೋಕ
 

ಅಲ್ಲಿಯ ವಾಸಿಗಳು ಅತ್ಯಂತ ಸುಖಿಗಳು

ಯಾರಾರ್ಯಾರು, ಯಾವ್ಯಾವ ವಿಷಯವನು ಬಯಸುವರೊ
 

ಎಲ್ಲವೂ ಲಭಿಸುವುದು ಸಂಕಲ್ಪದಿಂದ

ಇಂತೆಂದು ವೇದಗಳು ಪ್ರತಿಪಾದಿಸುವುವು

ಇಂಥ ಮುಕ್ತಿಗೂ ಮಿಗಿಲು ಬೇರಾವ ಸಿರಿ ಇಹುದು ?
 
॥ ೭೮ ॥
 
ಮುಕ್ತಿಗೆ ಸಾಧನ
 

 
ಆ ಸುರರು ಮೊದಲಾಗಿ ನರರವರೆಗೂ ಕೂಡ

ಆನಂದ ತೀರ್ಥರ ಭಾಷ್ಯ ಭಾವವ ಅರಿತು

ಯೋಗ್ಯತೆಗೆ ಅನುಗುಣದಿ ಮಾತು ಮನಸುಗಳಿಂದ

ಬಾರಿಬಾರಿಗೂ ಯಾರು ಶ್ರವಣವನ್ನು ಮಾಡುವರೊ

ಅಂಥವರು ನರಹರಿಯ ಕರುಣೆಯನ್ನು ಪಡೆಯುವರು

ವೈಕುಂಠ ಲೋಕದಲ್ಲಿ ಸ್ಥಾನವನ್ನು ಗಳಿಸುವರು
 
76
 
77
 
78
 
79
 
॥ ೭೯ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲ ತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಹನ್ನೊಂದನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ
 
194 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
.