We're performing server updates until 1 November. Learn more.

This page has not been fully proofread.

ಶ್ರೀ ಗುರುಭೋ ನಮಃ
 
ಮೊದಲನೆಯ ಸರ್ಗ
 
ಮಂಗಲಾಚರಣೆ (ನಾರಾಯಣ ವಂದನೆ)
 
ನಮಿಸಿ ಬಾಗುವ ನಿನಗೆ, ಶ್ರೀ ನಾರಾಯಣ!
ವರಮುಖ್ಯ ಪ್ರಾಣನ ಒಡೆಯನಾಗಿಹ ನೀನು
ಉದಯರವಿಯಂದದ ಚೆಲುವ ಕಾಂತಿಯ ಹೊತ್ತ
ಚೇತನಾಚೇತನದ ಕಾರಣನು ನೀನು
 
ಕಲ್ಯಾಣಗುಣಗಳ ಪ್ರಮುಖ ನೆಲೆ ನೀನು
ನಮಿಪೆ ಲಕ್ಷ್ಮೀರಮಣ, ನಮಿಪೆ, ನರಹರಿಯೆ!
 
ಶ್ರೀ ಕೃಷ್ಣವಂದನೆ
 
ನಿತ್ಯ ಸತ್ಯದ ನಿಧಿಯು ವೇದಗಳ ರಾಶಿ !
ಭಾರತೀಯರ ಭಾಗ್ಯ ಗೋವುಗಳ ಸಂಪತ್ತು
ಭಯರಹಿತವಾಗಿಹುದು ನಿನ್ನ ರಕ್ಷಣೆಯಿಂದ
ದೋಷವರ್ಜಿತವಾಗಿ, ಪರಿಶುದ್ಧ ರೂಪದೊಳು
ಶೋಭಿಸುತ್ತಿಹುದಿಂದು ನಿನ್ನ ಕೃಪೆಯಿಂದ
ಉದ್ದಂಡ ನಮನವು ಕೃಷ್ಣಭಗವಾನನೇ !
 
2