This page has been fully proofread once and needs a second look.

ಸಕಲ ಆಗಮಗಳಿಗೆ ವೇದ್ಯವಾಗಿಹ ರೂಪ

ಆನಂದ, ಜ್ಞಾನವೇ ಮೊದಲಾದ ಗುಣದಿಂದ
 

ಅಡಿಯಿಂದ ಮುಡಿವರೆಗೆ ಸಕಲ ಅವಯವದಿಂದ
 
ಮಾ

ಮತ್ಸ್ಯಾ
ದಿ ರೂಪಗಳೂ, ನರಸಿಂಹ, ವಾಮನ

ಎಲ್ಲವೂ ಶ್ರೀ ಹರಿಯ ನಿರ್ಭೇದ ರೂಪ

ರೂಪವೈವಿಧ್ಯದಲಿ, ದೋಷ ಲೇಶವೂ ಇಲ್ಲ
 
॥ ೭೨ ॥
 
ಹರಿಯ ಸ್ವರೂಪದ ದರುಶನದ ಭಾಗ್ಯ

ಅಧಿಕಾರಿಗಳಿಗುಂಟು, ಇತರರಿಗೆ ಇಲ್ಲ

ಸಂಪೂರ್ಣ ದರ್ಶನವು ಎಲ್ಲರಿಗೂ ಆಗದು

ಅವರವರ ಗುಣಗಳಿಗೆ ಅನುಸಾರವಾಗಿ

ಕೆಲವರಿಗೆ ಕಾಂಬುವುದು ಹರಿಪಾದ ಮಾತ್ರ

ಶಿರ, ನೇತ್ರ ದರ್ಶನವು ಅತ್ಯಧಿಕ ಪೂತರಿಗೆ
 
॥ ೭೩ ॥
 
ಶ್ರೀ ಹರಿಯ ರೂಪವು ಅತ್ಯಧಿಕ ಕಾಂತಿಯದು
 

ಹಲವಾರು ರಮಣೀಯ ಕಾಂತಿಗಳ ಮಿಲನ

ಉದಯ ಸೂರ್ಯನ ತರಹ ಬಂಗಾರದ ಬೆಳಗು
 

ಮುತ್ತಿನ ಹಾರಗಳ ಧವಳ ಕಾಂತಿಯ ಬೆಡಗು

ಇಂದ್ರನೀಲದ ತೆರದಿ ನೀಲವರ್ಣದ ಕಾಂತಿ

ಸುಖ, ಬೋಧ, ಸೌರಭ, ರೂಪ, ಗುಣ, ಸಂಗಮ
 
॥ ೭೪ ॥
 
ಮೂರ್ಜಗದಿ ಕಾಣದಿಹ ಅಚ್ಚರಿಯು ಇಲ್ಲಿಹುದು

ಶ್ರೀ ಹರಿಯ ರೂಪವದು ಅಷ್ಟೊಂದು ಅದ್ಭುತವು

ಪ್ರತಿಬಾರಿ ಶ್ರೀ ಹರಿಯ ಕಂಡಾಗಲೂ ಕೂಡ

"ಸೋಜಿಗವು ! ಸೋಜಿಗವು ! " ಎಂಬ ಉದ್ಗಾರ

ವೈಕುಂಠ ಲೋಕದಲಿ ಇಂದಿರಾಪತಿ ರೂಪ
 
""
 

ಮುಕ್ತರನು ಸರ್ವದಾ ಮುದಗೊಳಿಸುತಿಹುದು
 
ಹನ್ನೊಂದನೆಯ ಸರ್ಗ / 193
 
72
 
73
 
74
 
75
 
॥ ೭೫ ॥