2023-03-09 07:52:43 by jayusudindra
This page has been fully proofread once and needs a second look.
ಶ್ರೀ ಹರಿಯ ಹಸ್ತದಲ್ಲಿ ಚಕ್ರವೊಂದಿಹುದು
ಸೂರ್ಯರಾಶಿಯ ತೆರದಿ ಅದರ ಕಾಂತಿಯ ರಾಶಿ
ಪಾಂಚಜನ್ಯದ ಸೊಬಗು ವಿಧು ಬಿಂಬ ದಂತೆ
ಕೌಮೋದಕೀ, ಪದ್ಮ, ಮತ್ತೆರಡು ಹಸ್ತದಲ್ಲಿ
ಶಾರ್ಙ್ಗಧನ್ವನು ಈತ ಈ ಮಹಾಮಹಿಮ
ಪೃಥುವೃತ್ತ ಹಸ್ತಗಳು, ಅತಿ ತಾಮ್ರ ತಲಗಳು
॥ ೬೮ ॥
ಭಗವಂತನ ರೂಪ ಬಣ್ಣಿಸಲು ಶಕ್ಯವೆ ?
ಉತ್ತುಂಗ ನಿಲುವಿನ ಹೆಗಲುಗಳು ಎರಡು !
ಮಣಿ ಮಂಟಪವ ಪೋಲ್ವ ಆ ದಿವ್ಯ ವಕ್ಷ!
ವಕ್ಷ ಸನ್ನಿಧಿಯಲ್ಲಿ ಶ್ರೀ ಮಹಾಲಕುಮಿ !
ಈರೇಳು ಲೋಕವನು ಧರಿಸಿರುವ ಉದರ !
ನಾಭಿಕಮಲದಿ ಇರುವ ಬ್ರಹ್ಮನೆಂಬುವ ದುಂಬಿ !
॥ ೬೯ ॥
ಪರಮಾತ್ಮನ ಕಟಿಯು ಅತಿ ಭವ್ಯ ಕಟಿಯು !
ಅಲ್ಲಿ ಶೋಭಿಸುತಿರುವ ಆ ದಿವ್ಯ ಒಡ್ಯಾಣ !
ಒಡ್ಯಾಣದೊಡನಿರುವ ಸ್ವರ್ಣ ಪೀತಾಂಬರ
ಆನೆಗಳ ಸೊಂಡಿಲನು ಹೋಲುವ ತೊಡೆಗಳು
ವರ್ತುಲಾಕಾರದ ಆ ಭವ್ಯ ಜಘನೆಗಳು
ಭಗವಂತನ ರೂಪ ಉಪಮಾನವಿಲ್ಲದುದು
॥ ೭೦ ॥
ಧರಿಸಿರುವ ನೂಪುರವು ಅತಿ ದಿವ್ಯ, ಭವ್ಯ !
ಮುಂಗಾಲುಗಳ ಸೊಬಗು ಬಣ್ಣಿಸಲು ಸಾಧ್ಯವೆ ?
ಹೊಸತಾದ ಹವಳಗಳ ಕಾಂತಿಯ ಕಾಲುಗುರು
ಧ್ವಜ, ಚಕ್ರ, ಶಂಖಗಳ ಚಿಹ್ನೆಗಳು ಪಾದದಲ್ಲಿ
ಈ ಪಾದಧೂಳಿಗಳು ಮೂರು ಲೋಕಗಳನ್ನು
ಪಾವನವ ಮಾಡುವುವು ಎಲ್ಲ ಕಾಲಗಳಲ್ಲಿ
192 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
68
69
70
71
॥ ೭೧ ॥
ಸೂರ್ಯರಾಶಿಯ ತೆರದಿ ಅದರ ಕಾಂತಿಯ ರಾಶಿ
ಪಾಂಚಜನ್ಯದ ಸೊಬಗು ವಿಧು ಬಿಂಬ ದಂತೆ
ಕೌಮೋದಕೀ, ಪದ್ಮ, ಮತ್ತೆರಡು ಹಸ್ತದ
ಶಾರ್ಙ್ಗಧನ್ವನು ಈತ ಈ ಮಹಾಮಹಿಮ
ಪೃಥುವೃತ್ತ ಹಸ್ತಗಳು, ಅತಿ ತಾಮ್ರ ತಲಗಳು
ಭಗವಂತನ ರೂಪ ಬಣ್ಣಿಸಲು ಶಕ್ಯವೆ ?
ಉತ್ತುಂಗ ನಿಲುವಿನ ಹೆಗಲುಗಳು ಎರಡು !
ಮಣಿ ಮಂಟಪವ ಪೋಲ್ವ ಆ ದಿವ್ಯ ವಕ್ಷ!
ವಕ್ಷ ಸನ್ನಿಧಿಯಲ್ಲಿ ಶ್ರೀ ಮಹಾಲಕುಮಿ !
ಈರೇಳು ಲೋಕವನು ಧರಿಸಿರುವ ಉದರ !
ನಾಭಿಕಮಲದಿ ಇರುವ ಬ್ರಹ್ಮನೆಂಬುವ ದುಂಬಿ !
ಪರಮಾತ್ಮನ ಕಟಿಯು ಅತಿ ಭವ್ಯ ಕಟಿಯು !
ಅಲ್ಲಿ ಶೋಭಿಸುತಿರುವ ಆ ದಿವ್ಯ ಒಡ್ಯಾಣ !
ಒಡ್ಯಾಣದೊಡನಿರುವ ಸ್ವರ್ಣ ಪೀತಾಂಬರ
ಆನೆಗಳ ಸೊಂಡಿಲನು ಹೋಲುವ ತೊಡೆಗಳು
ವರ್ತುಲಾಕಾರದ ಆ ಭವ್ಯ ಜಘನೆಗಳು
ಭಗವಂತನ ರೂಪ ಉಪಮಾನವಿಲ್ಲದುದು
ಧರಿಸಿರುವ ನೂಪುರವು ಅತಿ ದಿವ್ಯ, ಭವ್ಯ !
ಮುಂಗಾಲುಗಳ ಸೊಬಗು ಬಣ್ಣಿಸಲು ಸಾಧ್ಯವೆ ?
ಧ್ವಜ, ಚಕ್ರ, ಶಂಖಗಳ ಚಿಹ್ನೆಗಳು ಪಾದದ
ಈ ಪಾದಧೂಳಿಗಳು ಮೂರು ಲೋಕಗಳನ್ನು
ಪಾವನವ ಮಾಡುವುವು ಎಲ್ಲ ಕಾಲಗಳಲ್ಲಿ
192 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
68
69
70
71