This page has been fully proofread once and needs a second look.

ಮುಕ್ತಲೋಕಗತಿ ಭಗವದ್ರೂಪ ವರ್ಣನೆ

 
ವೈಕುಂಠ ಲೋಕದಲ್ಲಿ ಶ್ರೀ ಹರಿಯೆ ಅಧಿಪತಿಯು

ಇಂದಿರಾಪತಿಯವನು, ಇಂದೀವರಾಕ್ಷ
 

ರಮಣೀಯ ರೂಪನು ಮನಸೆಳೆವ ಮೂರ್ತಿಯು

ಇತರ ಲೋಕದ ಜನಕೆ ಸರ್ವದಾ ಕಾಣನು

ಮುಕ್ತ ಜನರಿಗೆ ಮಾತ್ರ ಎಂದಿಗೂ ಗೋಚರನು

ಕೇಳಿರೀತನ ಮಹಿಮೆ ಭಕ್ತಿ ಆದರದಿಂದ
 
॥ ೬೪ ॥
 
ಪರಮಾತ್ಮನ ರೂಪ ಅತಿ ರಮ್ಯ ವಹುದು

ಮಣಿ ರಾಜಿ ರಾಜಿತವು ಆ ಮಹಾ ಮುಕುಟವು

ಶಿತಿಕಾಂತಿ ಕುಂತಳವು ಸಾವಿರ ಸಂಖ್ಯೆಯಲಿ

ಅರ್ಧ ಚಂದ್ರಾಕೃತಿಯ ತಿಲಕವದು ಹಣೆಯಲ್ಲಿ

ಶೋಭಿಸುತ್ತಿಹುದಲ್ಲಿ ಅಪರಿಮಿತ ಕಾಂತಿಯಲಿ

ಕಿವಿಗಳಲ್ಲಿ ಬೆಳಗಿಹುದು ಕರ್ಣಕುಂಡಲವು
 
॥ ೬೫ ॥
 
ಪರಮಾತ್ಮನಾ ಭವ್ಯ ವದನಾರವಿಂದವರು
ದು
ಪರಿಪೂರ್ಣ ಚಂದ್ರನನ್ನು ಪರಿಹಾಸ ಮಾಡುತಿದೆ

ತಾವರೆಯ ಹೂವುಗಳ ಅತಿಯಾಗಿ ಹೋಲುವ

ಅರುಣರಾಗದ ಭವ್ಯ ಅಧರ ಜೋಡಿಗಳು

ಸರಿಸಾಟಿ ಇಲ್ಲದ ಮೆಲುನಗೆಯ ಕುಡಿನೋಟ

ನಮಿಸುವ ಭಕ್ತರನು ಅಭಿನಂದಿಸುವುದು
 
॥ ೬೬ ॥
 
ಭಗವಂತನ ಕಂಠ ನವಕಂಬು ಕಂಠ
 

ಶೋಭಾಯಮಾನವದು ಮೂರು ರೇಖೆಗಳಿಂದ
 

ಕಂಠದಲಿ ಶೋಭಿಸುವ ಆ ದಿವ್ಯ ಕೌಸ್ತುಭವು
 

ಸೂರ್ಯಕಾಂತಿಯ ತೆರದಿ ಕಾಂತಿಯನ್ನು ಪಡೆದಿಹುದು
 

ರಮಣೀಯ ರತ್ನಗಣ ರಾರಾಜಿಸುತ್ತಿಹುದು

ಕಡಗ, ಉಂಗುರದಲ್ಲಿ, ಅಂಗದಗಳಲ್ಲಿ
 
ಹನ್ನೊಂದನೆಯ ಸರ್ಗ / 191
 
64
 
65
 
66
 
67
 
॥ ೬೭ ॥