This page has been fully proofread once and needs a second look.

ಸುರತ ಕ್ರೀಡೆಗಳಲ್ಲಿ ಅತಿ ನಿಪುಣೆ ಯುವತಿಯರು

ರಭಸದಲಿ ಸ್ತನಗಳನ್ನು ಕೆಳಗೆ ವಾಲಿಸುತ

ಮಣಿತವೇ ಮೊದಲಾದ ಅತಿ ದೃಷ್ಟ ಸುರತೆಗಳ
ತಗಳ
ವಿಸ್ತರಿಸಿ ಅವುಗಳಲ್ಲಿ ಕೌಶಲವ ತೋರಿಸುತ

ಯುವತಿ ಸಂಘವು ತಮ್ಮ ಪತಿಗಳ ಸಂಗದಲಿ
 

ಪರಮ ರತಿ ಸುಖವನ್ನು ಸವಿ ಸವಿದು ಮೆರೆಯುವರು
 
॥ ೬೦ ॥
 
ಸುರ ಲೋಕ ಲಲನೆಯರು ವೈಶಿಷ್ಟ್ಯ ಪೂರ್ಣರು

ಇತರ ಲೋಕದೊಳಿರದ ಗುಣವು ಇವರಲಿ ಇಹುದು
 

ಇವರ ಪತಿಯರು ಕೂಡ ಗುಣ ವಿಲಕ್ಷಣರು

ತಮ್ಮ ರಮಿಸುವ ಪತಿಯ ಹುರಿದುಂಬಿಸುತ್ತ

ರತಿಭೋಗ ಕ್ರೀಡೆಯಲಿ ಮೈಮರೆತು ಸುಖಿಸುವರು

ಇತರ ಲೋಕದೊಳಿರದು ಈ ದಿವ್ಯ ಮೈಥುನ
 
॥ ೬೧ ॥
 
ಸುರಲೋಕದಲ್ಲಿನ ಆ ಸುರತ ಕ್ರೀಡೆಯು

ಎಲ್ಲ ದೋಷಗಳಿಂದ ಮುಕ್ತವಾಗಿಹುದು

ಆ ದಿವ್ಯ ಕ್ರೀಡೆಯಲಿ ಶ್ರಮವೆಂಬುದಿಲ್ಲ

ಪತಿ ಪತ್ನಿಗಳ ನಡುವೆ ವಿರಹ ವೇದನೆ ಇಲ್ಲ

ಸವತಿಗಳ ಸಲುವಾಗಿ ಕಲಹಗಳು ಇಲ್ಲಿಲ್ಲ

ಎಲ್ಲವೂ ನಿರ್ದುಷ್ಟ ಎಲ್ಲವೂ ನಿರ್ದೋಷ
 
॥ ೬೨ ॥
 
ಶ್ರೀ ಹರಿಯ ಲೋಕವದು ವೈಕುಂಠ ಲೋಕ

ಎಲ್ಲೆಲ್ಲೂ ಹರಡಿಹವು ಪರಿಮಳ ಸುಗಂಧ

ಸತಿಪತಿಯ ದೇಹಗಳು ಜ್ಞಾನ, ಸುಖ ರೂಪಗಳು

ಆ ಮಿಥುನ ಒಡಲುಗಳ ಒಳ ಹೊರಗು ಕೂಡ

ಸೂಸುವುದು ಪರಿಮಳವು ಅತಿ ಸುವಾಸನೆಯು

ಮುನಿಗಳಿಂದಲೂ ಮಾನ್ಯ ಇಂಥ ಸುರತವು
 
190 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
60
 
61
 
62
 
63
 
॥ ೬೩ ॥