This page has been fully proofread once and needs a second look.

ಆ ತರಳೆಯರ ಕಣ್ಣುಗಳು ತಾವರೆಯ ಹೋಲುವುವು

ಜಘನಗಳನಾವರಿಸಿ ಗೌಪ್ಯವನು ಸೂಚ್ಯವಾಗಿರಿಸಿರುವ ವಸ್ತ್ರಗಳು

ಕರ್ಣ ಕುಂಡಲ, ಕಡಗ ಮುಂತಾದ ಆಭರಣ

ಸಮೃದ್ಧ ವಾಗಿರುವ ಕುಚದ ಕುಂಕುಮವು

ಮುಡಿಗೆ ಹೂಮಾಲೆಗಳು, ಕಂಗಳಿಗೆ ಕಾಡಿಗೆ
 

ಎಲ್ಲವೂ ಪೂರಕವು ಶೃಂಗಾರ ಸಾಧನಕೆ
 
॥ ೫೨ ॥
 
ಬಡನಡುವ ಸುಂದರಿಯರಾ ಚತುರ ಚದುರೆಯರು
 

ಪ್ರಾಣಸಖರೊಡಗೂಡಿ ಸ್ವಗೃಹಕೆ ತೆರಳಿಹರು

ರಜತ, ರತ್ನಗಳಿಂದ ಬೆಳಗಿ ಶೋಭಿಸುತ್ತಿರುವ
ತಿರುವ
ಮಧುಪಾನ ಪಾತ್ರೆಯಲಿ ಅಮೃತವ ತುಂಬಿ

ಮರ್ತ್ಯರಿಗೆ ಎಂದೆಂದೂ ಲಭಿಸದ ಸವಿಯನ್ನು

ಪ್ರಿಯತಮರ ಒಡಗೂಡಿ ಸವಿಯುತಿಹರು
 
॥ ೫೩ ॥
 
ಪ್ರತಿ ಹೆಜ್ಜೆ ಹೆಜ್ಜೆಗೂ ಲಜ್ಜೆಯನ್ನು ತೋರುತ್ತ

ಗೆಜ್ಜೆಯ ಕಾಲ್ಗಳನು ನಸುನಾಚಿ ಮುಂದಿಡುತ

ಪ್ರೇಮಾನುರಾಗದಲಿ ಕಾಯುತಿಹ ಪ್ರಿಯತಮನ

ಮೆತ್ತನೆಯ ಹಾಸಿಗೆಯ ಮಣಿಖಚಿತ ಮಂಚವನು
 

ಪತಿಯಿಂದ ಅತಿಯಾಗಿ ಹುರಿದುಂಬಿದವಳಾಗಿ
 

ಮೆಲಮೆಲನೆ ಏರಿದಳು ಅತಿ ವಿನಯದಲ್ಲಿ
 
॥ ೫೪ ॥
 
ಪತಿಯೆದುರು ಕುಳಿತಿರುವ ಆ ಏರುಜವ್ವನೆಯು

ಹೂವನ್ನು ಮುಡಿಯಲ್ಲಿ ಏರಿಸುವ ಸಲುವಾಗಿ

ತನ್ನೆರಡು ಕೈಯನ್ನು ಮೇಲಕೇರಿಸುವಾಗ

ಆಕೆಯ ಸ್ತನವೆರಡು ಭವ್ಯ ಶಿಖರಗಳಾಯ್ತು

ಬಾಹುಮೂಲದ ರೇಖೆ ಸುಸ್ಪಷ್ಟ ಗೋಚರಿಸಿ

ಪ್ರಿಯತಮನು ಆಕೆಯನ್ನು ತಬ್ಬಿ ಮುದ್ದಾಡಿದನು
 
188 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55
 
॥ ೫೫ ॥