This page has been fully proofread once and needs a second look.

ಲಲನೆಯರು ತಮ್ಮಯ ಪತಿಗಳನು ಕುಳ್ಳಿರಿಸಿ

ನರ್ತನವಗೈಯುವರು ಅವರ ಎದುರಿನಲಿ

ಹೂವುಗಳ ಬಿಡಿಸುವರು ಕೆಲವು ಲಲನೆಯರು

ಹಾರಗಳ ಪೋಣಿಸುತ ನಲಿಯುವರು ಕೆಲರು

ತಮ್ಮ ಪತಿಗಳ ಸುಖವೆ ತಮ್ಮ ಸುಖವೆಂದೆಣಿಸಿ

ರಮಣಿಯರು ರಮಿಸುವರು ಅವರೆಲ್ಲರನ್ನು
 
॥ ೪೮ ॥
 
ಇಂತು, ಆ ಉಪವನದಿ ಅತಿಸುಖದಿ ವಿಹರಿಸುತ
 

ಪೂರ್ಣ ಸಂತೃಪ್ತಿಯನ್ನು ಪಡೆದ ಆ ತರುಣರು

ಲತೆಯ ಮಂದಿರಗಳಲ್ಲಿ ಲಲನೆಯರ ಜೊತೆಗೂಡಿ
 

ತುಂಬು ಮೊಲೆ ಭಾರದಲಿ ಬಾಗಿದ ಅವರನ್ನು

ತಬ್ಬಿಟ್ಟು ಮುದ್ದಾಡಿ ವದನಾರವಿಂದದ ಮಧುವ ಹೀರುತ್ತ

ರತಿಕ್ರೀಡೆ ನಡೆಸುವರು ಮನ್ಮಥನ ತೆರದಿ
 
॥ ೪೯ ॥
 
ರಸಿಕತೆಯ ಭೋಗದಲ್ಲಿ ನುರಿತ ನಾರಿಯರವರು

ನೂಪುರದ ನಾದವನು ಅಡಿಗಡಿಗೆ ಸೂಸುತ್ತ

ಸಾರಸಿಕ ಹಕ್ಕಿಗಳ ದನಿಯ ಅನುಕರಿಸುತ್ತ

ರಸಿಕ ಪತಿಯರ ಕೂಡಿ ಬಿನ್ನಾಣಗೈಯುತ್ತ

ಅಮೃತಕೆ ಸಮನಿರುವ ನೀರ ಕೊಳದಲಿ ಇಳಿದು

ಜಲಮಡ್ಡು ಕೋತ್ಸವದಿ ವಿಹರಿಪರು ತನ್ಮಯದಿ
 
॥ ೫೦ ॥
 
ನೀರಿನೊಳು ಬಗೆಬಗೆಯ ಲೀಲಾವಿನೋದದಲಿ
 

ಮೈಮನವ ತಣಿಸುತ್ತ ಮೈಮರೆತ ನೀರೆಯರು

ವಿದ್ರುಮದಿ ಶೋಭಿಸುವ ತಟಗಳಿಗೆ ತೆರಳಿ

ಸಖಿಯರ ಕೈಯಿಂದ ಸುರಭಿಯನ್ನು ಸ್ವೀಕರಿಸಿ

ಅಂಗರಾಗವನೆಲ್ಲ
ಅಂಗ ಕೆಲ್ಲಕೂ ಪೂಸಿ
 
ಅಂಗರಾಗ
 

ಮೈಯ ಪರಿಮಳದಿಂದ ವಿಜೃಂಭಿಸಿದರು
 
ಹನ್ನೊಂದನೆಯ ಸರ್ಗ/ 187
 
48
 
49
 
50
 
51
 
॥ ೫೧ ॥