This page has been fully proofread once and needs a second look.

ಶಿಶಿರನ ಹಿರಿಮೆಯನು ಅರಿಯದವರಾರು ?

ಸ್ಫಟಿಕಮಯ ಟಿಕಮಯ ಪರ್ವತರ್ವತಕೆ ಮುದವ ನೀಡುವನವನು

ಹಿಮಭರಿತ ಹೇಮಂತನಾಪ್ತ ಸಖನಿವನು

ಫಲಿನಿ ಕುಲ ಕುಸುಮಗಳಿಗಾಸರೆಯ ನೀಡುವನು

ಅರಳಿರುವ ನವ ಕುಂದ ಪುಷ್ಪಗಳ ಕಾಂತಿಯಲಿ

ಶಿಶಿರ ನಗುತಿಹನೆಂಬ ಕಲ್ಪನೆಯು ಮೂಡಿಹುದು
 
॥ ೪೪ ॥
 
ವೈಕುಂಠ ಲೋಕವದು ಆರು ಋತುಗಳ ತವರು

ಹಿಮ, ಶೀತ ವರ್ಷಗಳ ದೋಷ ವಿಲ್ಲವು ಇವ
ಕೆ
ಮುಕ್ತ ಜನರಾರಿಗೂ ಬಾಧೆ ಇವುಗಳದಿರದು

ಎಲ್ಲ ಋತುಗಳೂ ಇಲ್ಲಿ ಆಪ್ಯಾಯಮಾನ

ಹಿತಕಾರಿಯಾಗಿಹವು ವೈಕುಂಠ ಜನತೆಗೆ

ಋತುಗಣವೂ ನಿರ್ದೋಷವೆಂಬುದೇ ಸೋಜಿಗವು
 
॥ ೪೫ ॥
 
ವೈಕುಂಠ ವಾಸಿಗಳು ಸಹಜದಲ್ಲಿ ಮುಕ್ತರು

ನಿರ್ದಿಷ್ಟ ಕರ್ಮಗಳ ಬಂಧನವು ಅಲ್ಲಿಲ್ಲ

ಕರ್ಮದಾಚರಣೆಯಲ್ಲಿ ಅವರು ಸ್ವತಂತ್ರರು

ಆದರೂ ಕರ್ಮದಲ್ಲಿ ಅವರೆಲ್ಲ ತೊಡಗುವರು

ಫಲಪುಷ್ಪಮಾಲೆಗಳ ಶ್ರೀ ಹರಿಗೆ ಅರ್ಪಿಪರು

ಸಕಲ ಸಜ್ಜನ ಪ್ರಕೃತಿ ಸರ್ವದಾ ಒಂದಿಹುದು
 
॥ ೪೬ ॥
 
ಪ್ರಮದೆಯರು ಆನಂದದತಿರೇಕದಿಂದ

ಶೃಂಗಾರವನದೊಳಗೆ ಸ್ಪಚ್ಛಂದ ವಿಹರಿಸುತ

ಪ್ರಿಯತಮರ ಜೊತೆಯಲ್ಲಿ ಸತತವೂ ಸುಖಿಸುತ್ತ

ಗಾನದಸುಧೆಯಮೃತವ ಎಲ್ಲೆಲ್ಲೂ ಹಂಚುತ್ತ

ಮಧುವೈರಿ ಚರಿತೆಯನು, ಮಧುರ ಸವಿಗೀತೆಯನು

ಮಧುರವಾಣಿಯಲವರು ಸತತ ಪಾಡುತಲಿಹರು
 
186 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥