This page has been fully proofread once and needs a second look.

ಅರಳಿರುವ ಮಾಧವೀ ಕುಸುಮ ಲತೆಗಳ ಕಂಪು

ಹೊಚ್ಚ ಹೊಸ ಸಂಪಿಗೆ, ಇತರ ಹೂಗಳ ಪೆಂಪು

ಹೂಗಳನು ಚುಂಬಿಸುವ ದುಂಬಿಗಳ ಇಂಪು

ಮಧುಮಾಸ ಮಾಧುರ್ಯ ಮೇಳವಿಸಿ ನಿಂದಿಹವು

ಮಧುಸೂದನ ಪ್ರಿಯರ ಮನವ ಮುದಗೊಳಿಸಹುದು

ಆ ಉಪವನದ ಹಿರಿಮೆಯನು ಎಂತು ಬಣ್ಣಿಪುದು ?
 
ಶ್ರೇ
॥ ೪೦ ॥
 
ಗ್ರೀ
ಷ್ ಋತುವಿನ ಇಂಥ ಮಧುರ ಪರಿಸರದಲ್ಲಿ

ಪ್ರಿಯತಮನು ಮಲ್ಲಿಗೆಯ ಹಾರವೊಂದನು ತಂದು

ಪ್ರಣಯಿನಿಯ ತುರುಬಿನಲಿ ಪ್ರೇಮದಲಿ ಮುಡಿಸುತ್ತ

ಪ್ರೇಮ ಸಲ್ಲಾಪಗಳ ಪಿಸುಮಾತ ಉಸುರುತ್ತ

ರಸಭರಿತ ಸ್ತನಗಳನ್ನು ಹಿಡಿದು ಮುದ್ದಾಡುತ್ತ

ಕಾಮಕೇಳಿಯ ದಿವ್ಯ ಲೋಕದಲ್ಲಿ ವಿಹರಿಸಿದನು
 
॥ ೪೧ ॥
 
ವರ್ಷಋತುವಿನ ಹರ್ಷ, ವರ್ಷಧಾರೆಯ ತರಹ

ಎಲ್ಲೆಲ್ಲೂ ನವಿಲುಗಳ ರಮಣೀಯ ಲಾಸ್ಯ

ಸಂಗೀತ, ನೃತ್ಯಗಳ ಅಪರೂಪ ದೃಶ್ಯ

ಗರಿಗೆದರಿ ಹಾಡುವ ನವಿಲುಗಳ ಗರಿ ಶಿಖೆಯ
 

ನೂರಾರು ನೇತ್ರಗಳು ವಿಜೃಂಭಿಸುತ್ತಿಹವು

ಸಾಸಿರದ ಕಣ್ಣುಗಳ ಇಂದ್ರನಾ ಪರಿಯಲ್ಲಿ
 
॥ ೪೨ ॥
 
ಚದುರೆಯರ ಮಾದಕತೆ ಶರತ್ಕಾಲದಂತೆ

ಅರಳಿರುವ ನೈದಿಲೆಯ ಹೂವಿನಂತಹ ಕಣ್ಣು !

ಬಿರಿದ ತಾವರೆಯಂಥ ಮಂದಹಾಸದ ಮೊಗವು

ಅರಗಿಣಿಯ ತೆರದಲ್ಲಿ ಉಲಿವ ಆ ಇನಿದನಿ

ಹಂಸಿಣಿಯ ನಾಚಿಸುವ ಕಾಲ್ಳೆಯ ಕಿಂಕಿಣಿ

ಇಂಥ ರಮ್ಯತೆಯಲ್ಲಿ ಕ್ರೀಡಿಸುವ ಮುಕ್ತರು
 
ಹನ್ನೊಂದನೆಯ ಸರ್ಗ / 185
 
40
 
41
 
42
 
43
 
॥ ೪೩ ॥