This page has been fully proofread once and needs a second look.

ತೀವ್ರಯೌವನ ಭರಿತ ಕುಚಭಾರದಿಂದಾಗಿ

ಬಾಗುತ್ತ ಬಳುಕುತ್ತ ಬಸವಳಿದು ನಡೆಯುತ್ತ

ಪ್ರಿಯತಮೆಯ ಬರವನ್ನು ಕಾತುರದಿ ಕಾಯುತಿಹ

ಪ್ರಿಯತಮರ ಕೂಟವನು ಸಂಧಿಸಿದರವರು

ಬಳಿಕವರ ಆಸರೆಯ ಬಲದಿಂದ ತರುಣಿಯ
ರು
ಪರಮ ಉಪವನದೊಳಗೆ ಮೆಲಮೆಲನೆ ತೆರಳಿದರು
 
॥ ೩೬ ॥
 
ಸೃಷ್ಟಿಯಲಿ ತಂಗಾಳಿ ಆಪ್ಯಾಯಮಾನ

ಅರಳಿರುವ ಹೂವುಗಳ ಅತಿ ಭಾರದಿಂದಾಗಿ

ತೂಗಿ ಬಳುಕುವ ಎಲ್ಲ ಸ್ವರ್ಣ ಮಣಿ ವೃಕ್ಷಗಳ
 

ಬಾಚಿ ಆಲಂಗಿಸುವ ಸಿಂಧುಸಖ ಮಾರುತನು

ಯಾರ ಸುಖವನು ತಾನೆ ಹೆಚ್ಚಿಸಲಸಮರ್ಥ ?
 

ಮಾರುತನ ಮಹಿಮೆಯದು ವರ್ಣನಾತೀತ
 
॥ ೩೭ ॥
 
ಸ್ವರ್ಗದಲ್ಲಿ ಹುದೊಂದು ರಮ್ಯ ಉದ್ಯಾನ
 

ಔಪಚಾರಿಕವಾಗಿ ನಂದನವು ಎನಿಸಿಹುದು

ಆದರಿದು ವಾಸ್ತವದಿ ನಂದನವು ಅಲ್ಲ

ನಿಯಮೇನ ಎಲ್ಲರಿಗೂ ಸುಖವ ನೀಡುವುದಿಲ್ಲ

ಶ್ರೀ ಹರಿಯ ವೈಕುಂಠ ಲೋಕದೊಳು ಇರುವ

ಆ ವನವೇ ನಿಜವಾದ ನಂದನೋದ್ಯಾನ
 
॥ ೩೮ ॥
 
ಮುಕ್ತ ಭೋಗ ವರ್ಣನೆ
 

 
ವೈಕುಂಠ ಲೋಕದ ಈ ಉದ್ಯಾನದಲ್ಲಿ

ಹಲವಾರು ಶ್ರೇಷ್ಠತಮ ವೃಕ್ಷಗಳು ಇಹವು

ವರ ಪಾರಿಭದ್ರಕವು, ವ್ರಜ ಪಾರಿಜಾತವು

ವರ ಕಲ್ಪವೃಕ್ಷವು, ಸಂತಾನ, ಚಂದನ

ಎಂಬಂಥ ಐದು ವಿಧ ದೇವವೃಕ್ಷಗಳಿಹುವು

ಸಾರ್ವಕಾಲಿಕವಾಗಿ ಆರು ಋತುಗಳು ಇಹವು
 
184 / ಶ್ರೀ ಸುಮಧ್ವವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥