This page has not been fully proofread.

ತರುಣಿಯರ ಕೈಗಳವು ಚೈತ್ರಪಲ್ಲವದಂತೆ
ಬಂಗಾರ ಬಳೆಯಿಂದ ಸಿಂಗಾರವಾಗಿಹವು
ಬಳೆಯ ಕಿಂಕಿಣಿನಾದ ಕೇಳಲತಿ ಮಧುರ
ಅತಿ ಚೂಪ, ತರುಣಿಯರ ಕೋಮಲೋದರಗಳು
ನವಿರಾಗಿ ಹರಡಿಹವು ಸೂಕ್ಷ್ಮ ರೋಮಗಳು
ತ್ರಿವಲಿ ಎಂಬುವ ಸೂಕ್ಷ್ಮ ರೇಖೆಗಳು ಇಹವಲ್ಲಿ
 
ತರುಣಿಯರ ಕುಚಗಳು ಕಂಗಳಿಗೆ ಹಬ್ಬ
ರಸಭರಿತ ಕುಂಭಗಳು ಆ ಎರಡು ಕುಚಗಳು
ಅವುಗಳಲ್ಲಿನ ಕಾಂತಿ ಅಮೃತ ಜಲ ಸೇಚನ
ಕೊರಳಲ್ಲಿ ಇಳಿದಿರುವ ಧವಳ ಮಣಿ ಮಾಲೆಗಳು
ಎದೆಯಲ್ಲಿ ಲಾವಣ್ಯ ಲಾಸ್ಯವಾಡುವುವು
ಕಬ್ಬಿನಂತಿಹ ನೋಟ ಕಬ್ಬಿಗಗೆ ಕಬ್ಬ
 
ಬಲದ ಕೈಯಲಿ ಕಮಲ ಪುಷ್ಪವನ್ನು ಹಿಡಿದಿಹರು
ಎಡದ ಕೈಯನು ಸಖಿಯ ಭುಜದ ಮೇಲಿರಿಸಿಹರು
ಕುಂಡಲದಿ ಶೋಭಿಸುವ ಆ ಎರಡು ಕೆನ್ನೆಗಳು
ಚೆಲು ಕಾಂತಿ ಸೂಸಿರುವ ಮಂದಹಾಸದ ಮೊಗವು
ಸ್ವಾಗತವ ಬಯಸುತಿಹ ಕಣ್ಣುಗಳ ಕುಡಿನೋಟ
ಶೃಂಗಾರ ರಸಧಾರೆ ಈ ಚದುರೆಯರ ಮೋರೆ
 
ಹಾರು ಯಂತ್ರವನಿಳಿದು ಲಗುಬಗೆಯ ನಡಿಗೆಯಲ್ಲಿ
ಬೆಡಗು ಬಿನ್ನಾಣಗಳ ಸುರಲೋಕ ಲಲನೆಯರು
ಒಡ್ಯಾಣ ನೂಪುರದ ಝಣ ಝಣತ್ಕಾರದಲಿ
ಬಾಗಿ ಬಳುಕುತ ತಮ್ಮ ಅಡಿಗಳನ್ನು ಇಡುತಿರಲು
ಅವರ ದೇಹದ ಸೊಬಗ ಸವಿಯಲೋ ಎಂಬಂತೆ
ಮುನ್ನಡೆದ ತರುಣರು ಹಿನ್ನೋಟ ಬೀರಿದರು
 
ಹನ್ನೊಂದನೆಯ ಸರ್ಗ / 183
 
32
 
33
 
34
 
.
 
35