This page has not been fully proofread.

ಹಾರುಯಂತ್ರಗಳಿಂದ ಕೆಳಗಿಳಿವ ತರುಣಿಯರು
 
ಸೌಂದರ್ಯ ರಾಶಿಯಲ್ಲಿ ಸರಿಸಾಟ ಇರದವರು
 
ಪದ್ಮರಾಗದ ಮಣಿಯ ಕೆಂಪು ಬಣ್ಣದ ಕೆಲರು
ಮುತ್ತಮಾಲೆಯ ತೆರದ ಧವಳ ರಾಗದ ಕೆಲರು
ಇಂದ್ರನೀಲಗಳಂತೆ ಕೃಷ್ಣವರ್ಣದ ಕೆಲರು
ಆಭರಣಭೂಷಿತರು ಸುಂದರಿಯರೆಲ್ಲರೂ
 
ಅಳಿಸಲಾಗದ ಕಾಂತಿ ಅವರ ಮೈ ಕಾಂತಿ
ಅತಿ ಸೂಕ್ಷ್ಮ ಅಂಬರವ ಧರಿಸಿಹರು ಅವರು
ಗಿಣಿಗಳುಲಿದಂತಿಹುದು ಅವರ ಆ ವಾಣಿ
ಸ್ತನದ ಜೋಡಿಗಳಂತೂ ಶೋಭಾಯಮಾನ
ತರಳೆಯರ ಸೌಂದರ್ಯವೆಂತು ಬಣ್ಣಿಪುದು ?
ಜಲಧರಾವಲಯದ ಮೇಘಪಕ್ಷಿಗಳಂತಿಹರು
 
ಸುರಲೋಕ ರಮಣಿಯರ ಪಾದ ಪಲ್ಲವದಲ್ಲಿ
ಪದ್ಮ ಮಣಿಯಂತಿಹುದು ಅರುಣ ನಖ ಪಂಕ್ತಿಗಳು
ಅವರು ನಡೆಯುವ ನೆಲದ ಬಣ್ಣದ ಜೊತೆಗೂಡಿ
ಉಗುರ ಬಣ್ಣವು ಬೆರೆತು ಎಲ್ಲವೂ ಅಸ್ಪಷ್ಟ!
ಬಳಿಕ ಭೂಮಿಯ ಬಣ್ಣ ಸ್ಪಟಿಕ ವರ್ಣವ ತಳೆದು
ತರುಣಿಯರ ನಖ ಕಾಂತಿ ಸುಸ್ಪಷ್ಟವಾಯ್ತು
 
ಸುರಲೋಕ ತರುಣಿಯರ ಅಂಗಾಂಗ ಮಾಧುರ್ಯ
ನೋಡಿ ಸವಿಯಲು ಬೇಕು : ಕೇಳಿ ತಿಳಿಯುವುದಲ್ಲ
ಹರಿಣಾಕ್ಷಿ ಎಂಬುವ ವರ್ಣನೆಗೆ ನಿಲುಕಿರುವ
ಆ ರಮಣಿಯರ ಜಘನಗಳು ಅತ್ಯಂತ ರಮಣೀಯ
ಆ ಜಘನ ಮಂಡಲಕೆ ತೆರೆಯೆನಿಪ ವಸ್ತ್ರಗಳು
ನಿಶ್ಚಿತದಿ ಮನ್ಮಥನ ವಿಜಯ ಪತಾಕೆಗಳು !
 
182 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31