This page has been fully proofread once and needs a second look.

ಅನಂತ ಸಖರಾದ ವೈಕುಂಠವಾಸಿಗಳು

ಸತತವೂ ಸುಖವನ್ನು ಅನುಭವಿಸುವವರು

ತಾರತಮ್ಯವ ನೆನೆದು ಅದರಂತೆ ನಡೆವವರು

ಗುರುಹಿರಿಯರೆಲ್ಲರಲಿ ಭಕ್ತಿಯನ್ನು ತೋರುವರು

ಒಡನಾಡಿಗಳ ಸಂಗ ಅತಿಪ್ರೇಮ ತೋರುವರು

ಆ ಸಕಲ ಮುಕ್ತರೂ ಸತ್ಯ ಸಂತುಷ್ಟರು
 
॥ ೨೪ ॥
 
ಸುರಲೋಕ ವಾಸಿಗಳು ಸೌಂದರ್ಯ ಖನಿಗಳು

ಉದಯ ಚಂದ್ರನ ತೆರದಿ ಕೆಂಪು ಬಣ್ಣವ ಹೊಂದಿ
 

ಹರಿಯ ಚಂದನವೆಂಬ ಅಂಗ ಲೇಪನದಿಂದ
 

ಮಧುರ ಪರಿಮಳವನ್ನು ಸೂಸುತ್ತಲಿಹರು
 

ಚಾಮರವ ಬೀಸುತಿಹ ಅನುಚರರ ಒಡಗೂಡಿ
 

ನಿತ್ಯ ತಾರುಣ್ಯದಲ್ಲಿ ವಿಹರಿಸುತ್ತಿಹರು
 
॥ ೨೫ ॥
 
ನರ್ತನ ವಿಲಾಸದಲಿ ಕಂಗಳನು ತಣಿಸುತ್ತ

ಮೃದು ಗೀತೆ ವಾದ್ಯಗಳ ಮಾಧುರ್ಯ ಸವಿಯುತ್ತ
 

ಸಗ್ಗದ ಸುಖದಲ್ಲಿ ಮೈಮರೆಯುತಿಹರು

ಏರು ಜವ್ವನದಲ್ಲಿ ಬೀಗುತ್ತ ಬಾಗುತ್ತ

ಕಮಲನೇತ್ರೆಯರಾದ ರಮಣಿಯರ ರಮಿಸುತ್ತ

ವೈಕುಂಠವಾಸಿಗಳು ವೈಭವವ ಸವಿಯುವರು
 
॥ ೨೬ ॥
 
ಚೆಲುವಾದ ಹರಿಣಿಗಳ ಕಣ್ಣುಗಳ ತರುಣಿಯರು

ಉದ್ಯಾನವನದತ್ತ ಹೊರಟ ಪತಿಯರ ಹಿಂದೆ

ಹೊರಡುವರು ಬಿಂಬದ ಪ್ರತಿಬಿಂಬದಂತೆ

ಚಂದ್ರಮಂಡಲದಿಂದ ಹೊರಟ ಕಿರಣಗಳಂತೆ

ನಿರ್ಮಲ ವಿಮಾನಗಳ ವಲಯಗಳ ಮಧ್ಯದಲ್ಲಿ
ಲಿ
ಹೊರಡುವರು ಮೆಲಮೆಲನೆ ಈ ತರುಣಿ ವೃಂದ
 
ಹನ್ನೊಂದನೆಯ ಸರ್ಗ / 181
 
24
 
25
 
26
 
27
 
॥ ೨೭ ॥