This page has been fully proofread once and needs a second look.

ವೈಕುಂಠಲೋಕದಲಿ ಅಗಣಿತರು ಬ್ರಹ್ಮರು

ಗರುಡರೂ ಶೇಷರೂ ಇಂದ್ರರೂ ಅಗಣಿತರು

ಅವರೆಲ್ಲರೂ ತಮ್ಮ ಸಹಧರ್ಮಿಣಿಯರೊಡನೆ

ಶ್ರೀ ಹರಿಯ ದರುಶನದ ಲಾಭವನ್ನು ಪಡೆಯುತ್ತ

ಶ್ರೀ ಹರಿಯ ಧ್ಯಾನದ ಸವಿಯನ್ನು ಸವಿಯುತ್ತ

ಆನಂದ ರಸವನ್ನು ಅನುಭವಿಸುತಿಹರು
 
॥ ೨೦ ॥
 
ಮುಕ್ತ ವರ್ಣನೆ
 

 
ಆ ಪುರದಿ ಶ್ರೀ ಹರಿಯ ಸಾಮೀಪ್ಯ ಪಡೆದವರು

ನಾಲ್ಕು ತೋಳುಗಳಿಂದ ವಿಜೃಂಭಿಸಿಹರು

ಅವರ ಕಣ್ಣುಗಳೆಲ್ಲ ಕಮಲದಂತಿಹವು

ವೇಷಭೂಷಣವೆಲ್ಲ ಅತ್ಯಂತ ಮೋಹಕವು

ಉದಯರವಿಯಂದದ ಕಾಂತಿಯಲ್ಲಿ ಬೆಳಗುತಿಹ

ಮೇಘವರ್ಣದ ಇವರು ವಿಹರಿಪರು ಮುದದಿಂದ
 
॥ ೨೧ ॥
 
ಸಾಲೋಕ್ಯ ಸಾರೂಪ್ಯ ಸಾಮೀಪ್ಯ ಸಾಯುಜ್ಯ

ಎಂಬಂಥ ನಾಲ್ಕು ವಿಧಿ ಮುಕ್ತರೂಪಗಳುಂಟು

ಭಗವಂತ ಸಾಮೀಪ್ಯ ಪಡೆದವರು ಮಾತ್ರ

ಅನುಪಮಾನಂದವನು ಪಡೆವರೆಂಬುದು ಅಲ್ಲ

ವೈಕುಂಠ ಲೋಕವನ್ನು ಸೇರುವ ಸಕಲರಿಗೂ

ಅಪರಿಮಿತ ಆನಂದ ಲಾಭ ಲಭಿಸುವುದು
 
॥ ೨೨ ॥
 
ಮರ್ತ್ಯಲೋಕದ ಬಾಧೆ ಯಾವುದೂ ಇಲ್ಲಿಲ್ಲ

ಹುಟ್ಟು ಸಾವುಗಳಿಲ್ಲ ಮುಪ್ಪಿನ ಭಯವಿಲ್ಲ

ಮೂರು ವಿಧ ತಾಪಗಳ ಸುಳಿವು ಇಲ್ಲಿಲ್ಲ

ಮಾನವರ ಬಾಧಿಸುವ ಕಾಮ ಕ್ರೋಧಾದಿಗಳು

ಸತ್ವ, ರಜ, ತಮಸೆಂಬ ಮೂಲ ಗುಣರೂಪಗಳು

ಎಲ್ಲವನು ತೊರೆದಿಹರು ವೈಕುಂಠವಾಸಿಗಳು
 
180 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥