This page has been fully proofread once and needs a second look.

"ಆ ಪುರದ ಮನೆಮನೆಯೂ ಭವ್ಯತೆಯ ಬೀಡು

ತುಲೋಪಗತವಾದ ಚಿತ್ರ ಸುವಿತಾನಗಳ

ಅಡಿಯಲ್ಲಿ ಜೋಲುತಿಹ ಮಣಿರತ್ನ ಮಾಲೆಗಳು

ಮನೆಯ ಒಳ ಹೊರಗೆಲ್ಲ ತುಂಬಿ ತುಳುಕುತಲಿಹುದು

ಮಣಿಕಾಂತಿ ಪ್ರಖರತೆಯು ಹೊರಚೆಲ್ಲಿ ಹರಡಿಹುದು

ಎಂಬ ವಿಭ್ರಮೆ ಎಲ್ಲ ನೋಟಕರಿಗಹುದು
 
" ॥ ೧೨ ॥
 
"ಶ್ರೀ ಹರಿಯ ನಗರಿ ಇದು ಭವ್ಯತೆಯ ಬೀಡು

ಸಕಲ ವಸ್ತುಗಳಲ್ಲಿ ಸ್ವರ್ಣ ಮಣಿ ಮಾಲೆಯಲಿ

ಸನ್ನಿಹಿತಳಾಗಿಹಳು ಶ್ರೀ ರಮಾದೇವಿ
 

ಅಳೆಯಲಾಗದು ಇದನು ಮನುಜರ ಮಾನದಂಡದಿಂದ
 

ಅತಿಶಯೋಕ್ತಿಯ ನುಡಿವ ಕವಿವರ್ಯರೂ ಕೂಡ

ಸೋಲುವರು ಬಣ್ಣಿಸಲು ಇಂಥ ವೈಭವವ
 
" ॥ ೧೩ ॥
 
"'ಜನನಿಬಿಡವಾಗಿಹುದು ಮುಕುತರಿಂದೀ ನಗರಿ

ಬ್ರಹ್ಮದೇವರು ಪ್ರಮುಖ ಈ ಮಂದಿಯಲ್ಲಿ

ಅತಿ ಪೂರ್ವ ಕಾಲದಿಂ ಬರುತಿಹರು ಜನರಿಲ್ಲಿ

ಆದರೂ ಕಿಂಚಿತ್ತು ಜನರ ದಟ್ಟಣೆ ಇಲ್ಲ

ಎಲ್ಲೆಲ್ಲೂ ವಿಸ್ತಾರ ಬಯಲು ಪ್ರದೇಶಗಳು

ಶ್ರೀ ಹರಿಯ ಮಹಿಮೆಯನು ಏನೆಂದು ಬಣ್ಣಿಪುದು ?
 
" ॥ ೧೪ ॥
 
"ಹಲವಾರು ದಿವಿನಾದ ಮಂದಿರಗಳುಂಟಲ್ಲಿ

ಒಂದೊಂದು ಮಂದಿರವೂ ಅಷ್ಟಷ್ಟು ಶ್ರೇಷ್ಠ

ದೇವಮಂದಿರಗಳ ನಿವಹಗಳ ನಡುವೆ

ಸಕಲ ಭುವನದ ಒಡೆಯ ಶ್ರೀ ಹರಿಯ ಮಂದಿರ

ಮೂರು ಲೋಕದ ಎಲ್ಲ ಅದ್ಭುತವ ಮೀರಿದುದು

ನಕ್ಷತ್ರ ಪುಂಜದಲಿ ಚಂದ್ರ ಮಂಡಲದಂತೆ
 
178/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥