This page has been fully proofread once and needs a second look.

ವೈಕುಂಠ ವರ್ಣನೆ
 

 
ವೈಕುಂಠ ಲೋಕದಲ್ಲಿ ಶ್ರೀ ಹರಿಯ ಪುರಿ ಇಹುದು

ಎಂಥ ದ್ಭುತ ನಗರಿ! ಎಂತಹ ಐಸಿರಿ !

ಮಾತು ವಾಕ್ಯಗಳಲದನು ವರ್ಣಿಸಲು ಸಾಧ್ಯವೆ ?

ರತ್ನಮಣಿ ಮಯವಾದ ರಮಣೀಯ ಪ್ರಾಕಾರ

ಅವುಗಳಲ್ಲಿ ಪ್ರತಿ ಫಲಿತ ಅವುಗಳದೇ ಪ್ರತಿಬಿಂಬ

ಬಿಂಬಕ್ಕೆ ಉಪಮಾನ ಪ್ರತಿ ಬಿಂಬವಾಗಿಹುದು
 
॥ ೮ ॥
 
ಎಲ್ಲಿ ನೋಡಿದರಲ್ಲಿ ಶ್ವೇತಮಣಿ ಸೌಧಗಳು

ಅದರೊಡನೆ ಪದ್ಮಮಣಿ ಸೌಧಗಳ ಸಾಲು

ಯಾವುದಕ್ಕೆ ಹೋಲಿಪುದು ಈ ಸೌಧ ಸೌಂದರ್ಯ ?
 

ಶಯನ ಸೌಖ್ಯವನೀವೆ ಶ್ರೀ ಹರಿಗೆ ನಾನು

ಧವಳ ಕಾಂತಿಯ ನನ್ನ ಕಾಯದಲಿ ಪವಡಿಸಿಹ

ಅರುಣರವಿವರ್ಣದ ಶ್ರೀ ಹರಿಯೆ ಉಪಮಾನ
 
॥ ೯ ॥
 
ಭವನಗಳ ಸೂರಿಗೆ ಫಲಕಗಳು ಕೂಡಿಹವು

ಫಲಕಗಳ ತುದಿಯಲ್ಲಿ ಸ್ಟಿಕ ಮಣಿಗಳ ಕಾಂತಿ

ಮೇಲು ಹೊದಿಕೆಯ ತುಂಬ ಇಂದ್ರನೀಲದ ಮುಸುಕು

ಈ ಎರಡು ರಾಗಗಳ ಭವ್ಯ ಸಮ್ಮಿಲನವದು

ಶುಭ್ರ ಗಂಗೆಯ ಜೊತೆಗೆ ಯಮುನೆ ಸೇರಿದ ಹಾಗೆ

ಭವ್ಯತೆಯ ಪ್ರತಿರೂಪ ಆ ಸುರಲೋಕ ನಗರಿ
 
॥ ೧೦ ॥
 
ವೈಕುಂಠ ವಾಸಿಗಳು ಭ್ರಮೆ ಇಲ್ಲದವರೆ ?

ಅಂತಹ ನಿಯಮಗಳು ಎಲ್ಲಾದರಿದೆಯೆ ?

ಹಾಗಾದರಿಲ್ಲೊಂದು ಸೋಜಿಗವು ಇಹುದು

ವೈಕುಂಠ ಲೋಕದಲಿ ಮನೆಗಳ ಸಾಲಿನಲ್ಲಿ
ಲಿ
ಪಕ್ಷಿಗೃಹಗಳಲಿ ಬೊಂಬೆಗಳ ಗಡಣ

ಈ ಗಡಣ ನಿಜವೆಂದೇ ಭ್ರಮಿಸುವಂತಾಗಿತ್ತು
 
ಹನ್ನೊಂದನೆಯ ಸರ್ಗ / 177
 
8
 
10
 
11
 
॥ ೧೧ ॥