This page has been fully proofread once and needs a second look.

"ಫಲವನ್ನು ಚೆನ್ನಾಗಿ ಅರಿತ ಅಧಿಕಾರಿಗಳು

ಶಾಸ್ತ್ರಶ್ರವಣಗಳಲ್ಲಿ ಪ್ರವೃತ್ತರು ತಾವು
ಪ್

ಶ್
ರೋತೃವಿಗೆ ಮುದ ಕೊಡುವ ವಾಗ್ರಿಮಿಗಳು ತಾವು

ಜ್ಞಾನಾದಿ ಸಕಲ ಗುಣ ಪರಿಪೂರ್ಣರು

ಮಧ್ವ ಶಾಸ್ತ್ರದ ಶ್ರವಣ ಪಠನಾದಿ ಫಲವನ್ನು
 

ವಿವರದಲ್ಲಿ ತಾವೆಮಗೆ ಹೇಳಬೇಕು "
 
॥ ೪ ॥
 
ಶ್ರೀ ಶೇಷದೇವರಿಂದ ಶ್ರೀ ಮಧ್ವಭಾಷ್ಯದ ಫಲಶೃತಿ
 

 
ಸನಕಾದಿ ಮುನಿಗಳ ಮಾತನ್ನು ಆಲಿಸುತ

ಶ್ರೇಷ್ಠತಮ ಅರಿವನ್ನು ಪಡೆದ ಆ ಶೇಷರು

"ಮರ್ತ್ಯರಿಗೆ ಅತಿ ಪೂಜ್ಯ ಮಧ್ವ ಶಾಸ್ತ್ರ

ಮಧ್ವರಾ ಈ ಕೊಡುಗೆ ಅತ್ಯಮೂಲ್ಯ

ಮಧ್ವ ಶಾಸ್ತ್ರದ ಶ್ರವಣ ಅತಿ ಪೂಜನೀಯ

ಅದರ ಶ್ರವಣದ ಫಲವ ತಿಳಿಸುವೆನು ಕೇಳಿ
 
" ॥ ೫ ॥
 
"ಬೇಸಾಯ ಕಾರ್ಯದಲ್ಲಿ ಧಾನ್ಯವೇ ಮುಖ್ಯ

ಹುಲ್ಲು ಹೊಟ್ಟುಗಳೆಲ್ಲ ಗೌಣವಾಗುವುವು

ಮಧ್ವಶಾಸ್ತ್ರದ ಶ್ರವಣ ಅದರಂತೆ ಇಹುದು

ಸ್ವರ್ಗ ಲೋಕದಿ ಸ್ಥಾನ ಇದರಿಂದ ಸಿಗಬಹುದು

ಆದರದು ಗೌಣ; ದು ಮುಖ್ಯ ಫಲವಲ್ಲ

ಶಾರದಾ ಶುಕರೆಲ್ಲ ವರ್ಣಿಸಿಹ ಮೋಕ್ಷವೇ ಮುಖ್ಯಫಲವಹುದು
 
॥ ೬ ॥
 
'ಸುರರಲ್ಲಿ ಅತಿ ಶ್ರೇಷ್ಠ ಶ್ರೀ ವಾಯುದೇವರು
 

ಭೂಮಿಯಲಿ ಆನಂದ ತೀರ್ಥರಾಗಿಹರು

ಸಕಲ ಸಚ್ಛಾಸ್ತ್ರಗಳೂ ಇವರಿಂದ ರಚಿತ

ಶ್ರವಣ ಮನನಗಳಿಂದ ಪರಮ ವೈಷ್ಣವ ದೀಕ್ಷೆ

ಪಡೆವ ಸಜ್ಜನಕೆಲ್ಲ ಆ ನಮ್ಮ ಶ್ರೀ ಹರಿಯು

ಕರುಣಿಪನು ವೈಕುಂಠ ಲೋಕ ರಂಜನೆಯ
 
176/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥