This page has been fully proofread once and needs a second look.

ಅ೦ದಿನಾ ಕಾಲದಲಿ ಎಲ್ಲ ಕಡೆಯಲ್ಲಿ

ಮಾಯಾವಾದದ ಬಿಳಲು ಜನಮನದಿ ಮೂಡಿತ್ತು
 

ವಿರೋಧಾಭಾಸಗಳ ಸರಮಾಲೆ ಈ ವಾದ

ಮಧ್ವರ ವ್ಯಾಖ್ಯಾನ ಅತಿ ತರ್ಕಬದ್ಧ

ಯಾರಿಂದಲೂ ಅದನು ಖಂಡಿಸಲಸಾಧ್ಯ

ಅಷ್ಟಾಂಗ ತರ್ಕದಲ್ಲಿ ಅದು ಶೋಭಿಸಿತ್ತು
 
॥ ೪೮ ॥
 
ಕುರುಕ್ಷೇತ್ರದಲ್ಲಿ ತೋರಿದ ವಿಶೇಷ ಮಹಿ
 
ಮೆ
 
ಕುರುಕ್ಷೇತ್ರವೆಂಬುದು ಅತಿ ದಿವ್ಯ ಕ್ಷೇತ್ರ

ಅರಸರಿಗೆ ಸ್ವರ್ಗದ ದಾರಿ ತೋರುವ ಕ್ಷೇತ್ರ

ಆಚಾರ್ಯ ಪರಿವಾರ ಅಲ್ಲಿ ತೆರಳಿತ್ತು

ಮಾರೀಚನಾಗಲಿಹ ವ್ಯಕ್ತಿಯೊಬ್ಬನ ಕಂಡು

ಭೀಮಸೇನನ ದಿವ್ಯ ಗದೆಯನ್ನು ನೋಡಿ

ದ್ವಾಪರದ ಯುದ್ಧದ ವೈಭವವ ಸ್ಮರಿಸಿದರು
 
ವೋ
॥ ೪೯ ॥
 
ವ್ಯೋ
ಮಕೇಶನಿಂದ ನಡೆದ ಪೂಜೆ
 

 
ಬಳಿಕವರು ತೆರಳಿದರು ಹೃಷಿಕೇಶ ಕ್ಷೇತ್ರಕ್ಕೆ

ಧವಳ ಕಾಂತಿಯ ಶಿವನು ಕ್ಷಣ ಮಾತ್ರ ಗೋಚರಿಸಿ

ನಮಿಸಿದನು ಮಧ್ವರಿಗೆ ಅತಿ ವಿನಯದಲ್ಲಿ

ಭಕ್ತನಿಗೆ ಸ್ವಪ್ನದಲ್ಲಿ ದರುಶನವ ನೀಡಿ

ಮೃಷ್ಟಾನ್ನ ಭೋಜನವ ಪರಿವಾರಕರ್ಪಿಸಿ

ಶ್ರೀಮದಾಚಾರ್ಯರಿಗೆ ಸತ್ಕಾರ ಮಾಡಿದನು
 
॥ ೫೦ ॥
 
ಇಷುಪಾತದಲ್ಲಿ ತೋರಿದ ಮಹಿಮೆ
 

 
ಹುಷುಪಾತವೆಂಬುವ ಮತ್ತೊಂದು ಕ್ಷೇತ್ರದಲ್ಲಿ
ಲಿ
ಕ್ಷೇತ್ರಾಧಿಪತಿಯಾದ ಶ್ರೀ ಪರಶುರಾಮರಿಗೆ

ಪೂಜೆಯನು ಸಲಿಸಿದರು ಅತಿ ಭಕ್ತಿಯಿಂದ

ರಾಜಕೇಲಿ ಎಂಬ ಬಾಳೆಯ ಹಣ್ಣುಗಳ

ಭುಜಿಸಿದರು ಮಧ್ವಮುನಿ ಸಾವಿರದ ಸಂಖ್ಯೆಯಲ್ಲಿ
ಲಿ
ಜನ ನೋಡಿ ನಲಿದರು ಅಚ್ಚರಿಯ ಕಂಡು
 
ಹತ್ತನೆಯ ಸರ್ಗ / 169
 
48
 
49
 
50
 
51
 
॥ ೫೧ ॥