This page has been fully proofread once and needs a second look.

ಶ್ರೀ ಮಧ್ವ ವಿಜಯ
 

 
ವ್ಯಾಸ ಶಿಷ್ಯೋತ್ತಮರು ಆನಂದ ತೀರ್ಥರು
 

ತಿಳಿವೆಂಬ ತಿಳಿಯಾದ ಬೆಳಕ ಮಿಂಚುಗಳಿಂದ
 

ಮೌಡ್ಢ್ಯವೆಂಬುವ ಕಾಳ ಕತ್ತಲೆಯ ಕಿತ್ತರು

ಜೊನ್ನವೆಂಬುವ ಹೊನ್ನ ಸಂಪದವ ಹೊಂದಿರುವ

ಆಶ್ವಯುಜ ಚಂದ್ರಮನು ಬಾನಿನಲಿ ಹೊಳೆವಂತೆ

ವಿಬುಧ ಸಭೆಯಲ್ಲವರು ಕಂಗೊಳಿಸಿ ಮೆರೆದರು
 
॥ ೪೪ ॥
 
ಕಾಲಕಾಲದೊಳೆಲ್ಲ ಸೃಷ್ಟಿ ಸ್ಥಿತಿ ಗತಿಗಳು

ಕಾಲಕಾಲದೊಳು ಸಂಹಾರ ಲಯಗಳು
 

ಎಲ್ಲವೂ ನಡೆಯುವುವು ಬ್ರಹ್ಮಸಂಕಲ್ಪದಲಿ

ಕಾಲ ನಿರ್ಧರಿಸುವ ನಾಶವವ ಹೊಂದನು
 

ವೇದಾದಿ ಶಾಸ್ತ್ರದೊಳು ಸಕಲ ಚೇತನದಲ್ಲೂ

ನೆಲೆಸಿರುವ ಶಕ್ತನವ, ಸರ್ವ ಸ್ವತಂತ್ರ
 
॥ ೪೫ ॥
 
ಶ್ರೀ ಹರಿಯು ಜಗಕೆಲ್ಲ ಬಳಿ ಇರುವ ಬಂಧು

ಜಗದೊಡನೆ ಹಗಲಿರುಳು ಆಟವಾಡುವನವನು

ದುಷ್ಟರನು ಶಿಕ್ಷಿಸುತ ಶಿಷ್ಟರನು ರಕ್ಷಿಪನು

ಮುಕುತಿಯೋಗ್ಯರನವನು ನಿರ್ದೋಷಿಯಾಗಿಪನು
 

ದೋಷ ವರ್ಜಿತನವನು ಕಲ್ಯಾಣ ಗುಣ ಪೂರ್ಣ
ಸಾ

ಸತ್ವಾ
ದಿ ಪ್ರಕೃತಿ ಗುಣ ರಹಿತನವನಾಗಿಹನು
 
॥ ೪೬ ॥
 
"ಸಮಾಭ್ಯಧಿಕ ರಹಿತನವ ಲಕುಮಿಪತಿ ಹರಿಯು

ಜಗದೆಲ್ಲ ರೂಪದಲಿ ಆತ ಭಿನ್ನ

ಆಗಮಗಳೆಲ್ಲದರ ಇದುವೆ ಸತ್ಸಾರ'
"
ಮುಂತಾದ ಹಿರಿದಾದ ಅರ್ಥಗಳನೆಲ್ಲ

ಆನಂದ ತೀರ್ಥರ ವ್ಯಾಖ್ಯಾನವೆಲ್ಲ

ವಿವರದಲಿ ತಿಳಿಸಿಹವು ಸುಜ್ಞಾನಿಗಳಿಗೆ
 
168/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥