This page has been fully proofread once and needs a second look.

ವಿಲವಿಲನೆ ನರಳುತ್ತ ವ್ಯಾಕುಲದಿ ಹೊರಳಿದರು

"ದಯಮಾಡಿ ಬಿಟ್ಟು ಬಿಡಿ ಓ ಮಹಿಮರೇ !

ನಿಮ್ಮ ಅಂಗಾಂಗ ಬೆರಳುಗಳು ಮೇರುಗಿರಿ ಸಮವಿಹವು

ತಾಳಲಾರೆವು ನಾವು, ಬಿಡುಗಡೆಯ ನೀಡಿ"

ಎಂದೆನುತ ಗುರುಗಳಲಿ ಬಿನ್ನಿನೈಸಿಕೊಂಡರು
 
॥ ೪೦ ॥
 
ಮಧ್ವ ಬಾಹುಗಳಿಂದ ಮುಕ್ತರಾದವರೆಲ್ಲ

ಮಧ್ವ ಬಲದೈಸಿರಿಗೆ ಮರುಳಾಗಿ ಹೋದರು
ಯಾರ ಭೂ

ಯಾರ ಭ್ರೂ
ಲಾಸ್ಯದಲಿ ಜಗವೆಲ್ಲ ಕುಣಿವುದೊ

ಯಾರಿಂದ ರುದ್ರೇಂದ್ರ ಸುರರೆಲ್ಲ ನಲಿವರೆ
ರೊ
ಅಂತಹ ವಾಯುವಿನ ದಿವ್ಯಾವತಾರವಿದು

ಇದನರಿಯದವರಿಗೆ ಸೋಜಿಗವು ಸಹಜ
 
॥ ೪೧ ॥
 
ಅಮರಾವತಿಯ ಪರಾಭವ
 

 
ಅಮರಾವತಿ ಎಂಬೊಬ್ಬ ಸನ್ಯಾಸಿಯೊಬ್ಬ

ಅಂದು ಪ್ರಚಲಿತವಿದ್ದ ಸಿದ್ಧಾಂತವೆಲ್ಲವನು

ತರ್ಕನಿಪುಣತೆಯಿಂದ ಖಂಡಿಸುತಲಿದ್ದ

ಇವನೊಮ್ಮೆ ಆನಂದ ತೀರ್ಥರಲಿ ಬಂದು

"ಪುರುಷಾರ್ಥ ಸಾಧನೆಗೆ ಜ್ಞಾನ ಕರ್ಮವು ಬೇಕು''
 

ಎಂಬುದನ್ನು ಸಾಧಿಸಿರಿ ಎಂದೆನುತ ಕೇಳಿದನು
 
॥ ೪೨ ॥
 
ಆನಂದ ತೀರ್ಥರು ಪರಿಪೂರ್ಣ ಪ್ರಜ್ಞರು

ಸನ್ಯಾಸಿ ಪ್ರಶ್ನೆಯನು ತಿಳಿಯಾಗಿಸಿದರು

"ಜ್ಞಾನದಿಂದಲೆ ಮೋಕ್ಷ, ಕರ್ಮ ಸಾಧನವದಕೆ'
"
"ಜ್ಞಾನವೆಂದರೆ ಏನು ?'" ಮತ್ತೊಮ್ಮೆ ಕೇಳಿದನು

'ಜ್ಞಾನವಿದ್ದರೆ ಮಾತ್ರ ಅದು ನಿನಗೆ ತಿಳಿಯುವುದು"

ಇಂತೆಂದು ಆತನನು ಖಂಡಿಸಿದರವರು
 
ಹತ್ತನೆಯ ಸರ್ಗ / 167
 
40
 
41
 
42
 
43
 
॥ ೪೩ ॥