This page has not been fully proofread.

ವಿಲವಿಲನೆ ನರಳುತ್ತ ವ್ಯಾಕುಲದಿ ಹೊರಳಿದರು
"ದಯಮಾಡಿ ಬಿಟ್ಟು ಬಿಡಿ ಓ ಮಹಿಮರೇ !
ನಿಮ್ಮ ಅಂಗಾಂಗ ಬೆರಳುಗಳು ಮೇರುಗಿರಿ ಸಮವಿಹವು
ತಾಳಲಾರೆವು ನಾವು, ಬಿಡುಗಡೆಯ ನೀಡಿ"
ಎಂದೆನುತ ಗುರುಗಳಲಿ ಬಿನ್ನಿಸಿಕೊಂಡರು
 
ಮಧ್ವ ಬಾಹುಗಳಿಂದ ಮುಕ್ತರಾದವರೆಲ್ಲ
ಮಧ್ವ ಬಲದೈಸಿರಿಗೆ ಮರುಳಾಗಿ ಹೋದರು
ಯಾರ ಭೂಲಾಸ್ಯದಲಿ ಜಗವೆಲ್ಲ ಕುಣಿವುದೊ
ಯಾರಿಂದ ರುದ್ರೇಂದ್ರ ಸುರರೆಲ್ಲ ನಲಿವರೆ
ಅಂತಹ ವಾಯುವಿನ ದಿವ್ಯಾವತಾರವಿದು
ಇದನರಿಯದವರಿಗೆ ಸೋಜಿಗವು ಸಹಜ
 
ಅಮರಾವತಿಯ ಪರಾಭವ
 
ಅಮರಾವತಿ ಎಂಬೊಬ್ಬ ಸನ್ಯಾಸಿಯೊಬ್ಬ
ಅಂದು ಪ್ರಚಲಿತವಿದ್ದ ಸಿದ್ಧಾಂತವೆಲ್ಲವನು
ತರ್ಕನಿಪುಣತೆಯಿಂದ ಖಂಡಿಸುತಲಿದ್ದ
ಇವನೊಮ್ಮೆ ಆನಂದ ತೀರ್ಥರಲಿ ಬಂದು
"ಪುರುಷಾರ್ಥ ಸಾಧನೆಗೆ ಜ್ಞಾನ ಕರ್ಮವು ಬೇಕು''
 
ಎಂಬುದನ್ನು ಸಾಧಿಸಿರಿ ಎಂದೆನುತ ಕೇಳಿದನು
 
ಆನಂದ ತೀರ್ಥರು ಪರಿಪೂರ್ಣ ಪ್ರಜ್ಞರು
ಸನ್ಯಾಸಿ ಪ್ರಶ್ನೆಯನು ತಿಳಿಯಾಗಿಸಿದರು
"ಜ್ಞಾನದಿಂದಲೆ ಮೋಕ್ಷ ಕರ್ಮ ಸಾಧನವದಕೆ'
"ಜ್ಞಾನವೆಂದರೆ ಏನು ?' ಮತ್ತೊಮ್ಮೆ ಕೇಳಿದನು
'ಜ್ಞಾನವಿದ್ದರೆ ಮಾತ್ರ ಅದು ನಿನಗೆ ತಿಳಿಯುವುದು"
ಇಂತೆಂದು ಆತನನು ಖಂಡಿಸಿದರವರು
 
ಹತ್ತನೆಯ ಸರ್ಗ / 167
 
40
 
41
 
42
 
43