This page has been fully proofread once and needs a second look.

ಪ್ರಕಟವಾದಳು ಅಲ್ಲಿ ಭಾಗೀರಥಿ ದೇವಿ

ಭಯಭಕ್ತಿಯಿಂದವಳು ಬಹುದೂರದಿಂದ

ನಮಿಸಿದಳು ಆಚಾರ್ಯ ಪಾದಾರವಿಂದಕ್ಕೆ

ಅಪ್ರತಿಮ ಸುಂದರಿಯು ಲೋಕದೊಳು ಆಕೆ

ಇದ ನೋಡಿ ಬೆರಗಾಗಿ ಆ ಶಿಷ್ಯರೆಲ್ಲ

ವಿಸ್ಮಯದಿ ಕುಳಿತರು ಚಕಿತರಾಗಿ
 
॥ ೩೬ ॥
 
ದೇಹಬಲದಲ್ಲೂ ಶಿಷ್ಯರನ್ನು ಮೀರಿಸಿದ ಗುರು
 

 
ಆನಂದ ತೀರ್ಥರು ಪಾಪ ಪರಿಹಾರಕರು

ಆದರೂ ನಡೆದರು ವಾರಣಾಸಿಯ ಕಡೆಗೆ
 

ಅಲ್ಲವರು ಮತ್ತೊಂದು ಮೋಜ ನಡೆಸಿದರು

ಶಿಷ್ಯರಲಿ ಹಲವರು ಬಲು ಗರ್ವಶಾಲಿಗಳು

ಬಾಹುಬಲದಲಿ ತಮಗೆ ಸಮರಿಲ್ಲ ಎಂವೆಂಬುವರು

ಮಧ್ವಮುನಿ ಅವರನ್ನು ಕುರಿತು ಇಂತೆಂದರು
 
॥ ೩೭ ॥
 
"ಗರುವ ಪಡದಿರಿ ನೀವು ಬಲವಂತರೆಂದು

ನೀವೆಲ್ಲ ಒಟ್ಟಾಗಿ ನಮ್ಮ ಮೇಲೆರಗಿರಿ

ದ್ವಂದ್ವ ಯುದ್ಧವ ನೀವು ನಮ್ಮೊಡನೆ ಮಾಡಿ

ನಿಮ್ಮೆಲ್ಲ ಶಕ್ತಿಯನ್ನು ಕಾಳಗದಿ ಬಳಸಿ

ಇಲ್ಲದಿರೆ ಗುರ್ವಾಜ್ಞೆ ಉಲ್ಲಂಘಿಸಿದರೆಂಬ

ಪಾತಕಕೆ ನೀವೆಲ್ಲ ಗುರಿಯಾಗಬಹುದು'
 
" ॥ ೩೮ ॥
 
ಗುರುಗಳಾಡಿದ ಮಾತ ಕೇಳಿದಾ ಶಿಷ್ಯರು

 
ತಮ್ಮೊಳಗೆ ಹದಿನೈದು ಮಂದಿಯನು ಆಯ್ದರು

ಅವರೆಲ್ಲ ಒಟ್ಟಾಗಿ ಗುರುವೆಡೆಗೆ ನುಗ್ಗಿದರು

ಎಲ್ಲರನೂ ಒಟ್ಟಾಗಿ ಕೆಡವಿದರು ಗುರುಗಳು

"ಸಾಮರ್ಥ್ಯವಿದ್ದವರು ಮೇಲೇಳಿ ನೋಡುವ
 
"
ಎಂದೆನುತ ಮೆಲುನಗೆಯ ಕುಹಕವಾಡಿದರು
 

ಮಧ್ವಬಂಧಕ್ಕೆ ಸಿಲುಕಿ ನಲುಗಿದರು ಶಿಷ್ಯರು
 
166 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥