This page has been fully proofread once and needs a second look.

ಗುರುಗಳನು ಕಾಂಬುವ ತವಕದಲಿ ಶಿಷ್ಯರು

ಗಂಗೆಯನು ನಾವೆಯಲಿ ತ್ವರಿತದಲಿ ದಾ
 
ಟಿ
ತೀರವನು ಸೇರಿದರು ಬಲು ಬೇಗ ಬೇಗ

ಗಂಗೆಯ ತೀರವದು ಬಲು ಶೋಭಿಸಿತ್ತು
 

ಜನನಿಬಿಡ ಜಂಗುಳಿ ಜಗಜಗಿ ದೀಪಗಳು
 

ಪಂಡಿತರ ಸೋಸ್ತೋಮವನು ಕಂಡರಾ ಶಿಷ್ಯರು
 
॥ ೩೨ ॥
 
ಗಂಗೆಯ ತಟದಲ್ಲಿ ಪಂಡಿತೋತ್ತಮ ಸಭೆಯು

ಸುರಲೋಕದಲ್ಲಿನ ಸಭೆಯಂತೆ ಕಂಡಿತು

ಆನಂದ ತೀರ್ಥರು ವೇದಾರ್ಥ ನಿಪುಣರು

ಅರ್ಥ ಸೂಕ್ಷ್ಮತೆಯನ್ನು ಸುಲಭದಲ್ಲಿ ಬಿಡಿಸುವರು

ದೇವಸಭೆಯಲಿ ಕುಳಿತ ಬ್ರಹ್ಮದೇವರ ತೆರದಿ

ಕಂಗೊಳಿಸಿ ಮೆರೆದಿದ್ದರಾನಂದ ತೀರ್ಥರು
 
॥ ೩೩ ॥
 
ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ
 

 
ಮರಳಿ ತೆರಳಿದರಾಗ ಆನಂದ ತೀರ್ಥರು

ಹಸ್ತಿನಾಪುರದತ್ತ ಪಯಣ ಮುಂದರಿಸಿದರು

ಆಲ್ಲೊಂದು ಸ್ಥಳದಲ್ಲಿ ಗಂಗೆಗತಿ ದೂರದಲಿ

ಏಕಾಂತವಾಗಿದ್ದ ಮಠವೊಂದರಲ್ಲಿ

ಶ್ರೀ ಹರಿಯ ಚಿಂತನೆಯ ಎಡೆಬಿಡದೆ ಮಾಡುತ್ತ

ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿದರು
 
॥ ೩೪ ॥
 
ಗಂಗೆಯಿಂದಲೂ ಪೂಜಿತರು
 

 
ಆನಂದ ತೀರ್ಥರಿಗೆ ಸೇವೆ ಸಲ್ಲಿಸಲೆಂದು
 

ದೇವನದಿ ಗಂಗೆಯು ಕವಲಾಗಿ ಒಡೆದು

ಭೂಮಿಯನ್ನು ಭೇದಿಸುತ ವರ ಬಳಿ ತೆರಳಿದಳು
 

ರುದ್ರಾದಿ ದೇವರಿಗೆ ಭಾರತಿಯು ಪೂಜ್ಯಳು

ಆಕೆಯೂ ಸೇವಿಪಳು ಆನಂದ ತೀರ್ಥರನು
 

ಗಂಗೆಯ ಸೇವೆಯಲಿ ಅಚ್ಚರಿ ಇನ್ನೇನು ?
 
ಹತ್ತನೆಯ ಸರ್ಗ / 165
 
32
 
33
 
34
 
35
 
॥ ೩೫ ॥